ವಾಟ್ಸಪ್ ಸಂಸ್ಥೆಯಿಂದ ಹೊಸ ಫೀಚರ್

822

ಪ್ರಜಾಸ್ತ್ರ ವಿಜ್ಞಾನ ತಂತ್ರಜ್ಞಾನ

ಸೋಷಿಯಲ್ ಮೀಡಿಯಾ ಬಳಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಅದರಲ್ಲೂ ವಾಟ್ಸಪ್ ಬಳಕೆ ಮಾಡುವವರ ಸಂಖ್ಯೆ ಹೆಚ್ಚಿಗೆ ಇದೆ. ಕಂಪ್ಯೂಟರ್ ನಲ್ಲಿ ಕೆಲಸ ಮಾಡುತ್ತಾ ವಾಟ್ಸಪ್ ಬಳಕೆ ಮಾಡುವವರಿಗೆ ಹೊಸ ಫೀಚರ್ ನೀಡಲಾಗಿದೆ.

ಯೆಸ್, ವಾಟ್ಸಪ್ ಸಂಸ್ಥೆ ವಿಡಿಯೋ ಕಾಲಿಂಗ್ ನ್ನ ಡೆಸ್ಕ್ ಟಾಪ್ ಮೂಲಕ ವಾಟ್ಸಪ್ ಬಳಸುವವರಿಗೆ ಗುರುವಾರದಿಂದ ನೀಡಿದೆ. ಎಂಡ್ ಟು ಎಂಡ್ ಎನ್ ಕ್ರಿಪ್ಟೆಡ್ ವಾಯ್ಸ್ ಮತ್ತು ವಿಡಿಯೋ ಕಾಲ್ ಮಾಡಬಹುದು ಎಂದಿದೆ. ಅದಕ್ಕಾಗಿ ಲಿಂಕ್ ಸಹ ನೀಡಿದೆ. ಕಂಪ್ಯೂಟರ್ ನಲ್ಲಿ ಲಿಂಕ್ ಡೌನ್ಲೋಡ್ ಮಾಡಿಕೊಂಡ್ರೆ ಸಾಕು ಡೆಸ್ಕ್ ಟಾಪ್ ಮೂಲಕ ವಾಟ್ಸಪ್ ವಿಡಿಯೋ ಕಾಲ್ ಮಾಡಬಹುದು.

ಸಧ್ಯಕ್ಕೆ ಇದು ಒಬ್ಬರಿಗೆ ಮಾತ್ರ ಕಾಲ್ ಮಾಡಬಹುದು. ಮುಂದಿನ ದಿನಗಳಲ್ಲಿ ಮಲ್ಟಿಪಲ್ ಕಾಲಿಂಗ್ ಗೆ ಅವಕಾಶ ನೀಡಲಾಗುವುದು ಎಂದಿದೆ. ಡೆಸ್ಕ್ ಟಾಪ್ ಮೂಲಕ ಕಾಲ್ ಮಾಡುವುದ್ರಿಂದ ವಿಡಿಯೋ ದೊಡ್ಡದಾಗಿ ಕಾಣುವ ಮೂಲಕ ಇನ್ನಷ್ಟು ಖುಷಿ ನೀಡಲಿದೆ.




Leave a Reply

Your email address will not be published. Required fields are marked *

error: Content is protected !!