ವೇಗದ ಚಾಲನೆಯಿಂದ ರಾಜ್ಯದಲ್ಲಿ ಅತೀ ಹೆಚ್ಚು ಸಾವು

222

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಸಂಚಾರಿ ನಿಯಮಗಳನ್ನು ಪಾಲಿಸುವ ಮೂಲಕ ಸುರಕ್ಷಿತವಾಗಿ ವಾಹನ ಚಲಾಯಿಸಿ ಎಂದು ಹೇಳಿದರೂ ಅನೇಕರು ಅತಿ ವೇಗವಾಗಿ ವಾಹನಗಳನ್ನು ಚಲಾಯಿಸುತ್ತಾರೆ. ಇದರ ಪರಿಣಾಮ ತಮಿಳುನಾಡು ಬಳಿಕ ಕರ್ನಾಟದಲ್ಲಿ ಅಪಘಾತದಿಂದ ಅತೀ ಹೆಚ್ಚು ಸಾವು ಸಂಭವಿಸುತ್ತಿವೆ.

ನ್ಯಾಷನಲ್ ಕ್ರೈಂ ರೆಕಾರ್ಡ್ ಬ್ಯುರೋ ಪ್ರಕಾರ ಕಳೆದ ವರ್ಷ ಕರ್ನಾಟಕದಲ್ಲಿ 34,647 ಅಪಘಾತಗಳು ಸಂಭವಿಸಿವೆ. ಇದರಲ್ಲಿ 10,038 ಮಂದಿ ಸಾವನ್ನಪ್ಪಿದ್ದಾರೆ. ಅತೀ ವೇಗದ ಕಾರಣಕ್ಕೆ 8,797 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ತಮಿಳುನಾಡಿನಲ್ಲಿ 11,419 ಜನರು ಮೃತಪಟ್ಟಿದ್ದಾರೆ.

ಕಳೆದ ವರ್ಷ ದೇಶದಲ್ಲಿ 4,03,116 ಅಪಘಾತ ಪ್ರಕರಣಗಳು ನಡೆದಿವೆ. 2,40,828 ಪ್ರಕರಣಗಳು ಅತೀ ವೇಗದ ಚಾಲನೆಯಿಂದ ನಡೆದಿವೆ.




Leave a Reply

Your email address will not be published. Required fields are marked *

error: Content is protected !!