ಲಾಕ್ ಡೌನ್ ಟೈಂನಲ್ಲಿ ‘ಸಜನಿ’ ಬ್ಯೂಟಿಗೆ ಇದೆಲ್ಲ ಬೇಕಿತ್ತಾ?

419

ಸ್ಯಾಂಡಲ್ ವುಡ್ ನಟಿ ಶರ್ಮಿಳಾ ಮಾಂಡ್ರೆ ಕಾರು ಅಪಘಾತವಾಗಿದೆ. ಇಂದು ಬೆಳಗಿನ ಜಾವ ಬೆಂಗಳೂರಿನ ವಸಂತನಗರದ ಅಂಡರ್ ಪಾಸ್ ಬಳಿ ಈ ಘಟನೆ ನಡೆದಿದೆ. ಕಾರಿನಲ್ಲಿ ನಾಲ್ವರು ಪ್ರಯಾಣಿಸ್ತಿದ್ರು. ಕಾರ್ ಯಾರು ಡ್ರೈವ್ ಮಾಡ್ತಿದ್ರು ಅನ್ನೋದು ಗೊತ್ತಾಗಿಲ್ಲ.

ನಟಿ ಶರ್ಮಿಳಾ ಮುಖಕ್ಕೆ ಗಾಯವಾಗಿದೆ. ಸ್ನೇಹಿತನೊಬ್ಬನ ಬಲಗೈಗೆ ಗಂಭೀರ ಗಾಯವಾಗಿದೆ. ಇವರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಡ್ರಿಂಕ್ ಆ್ಯಂಡ್ ಡ್ರೈವ್ ಮಾಡಿರುವ ಅನುಮಾನ ವ್ಯಕ್ತವಾಗಿದೆ. ಅಂಡರ್ ಪಾಸ್ ಪಿಲ್ಲರ್ ಗೆ ಡಿಕ್ಕಿ ಹೊಡೆದ ಪರಿಣಾಮ ಜಾಗ್ವರ್ ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ. ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾರ್ ವಶಕ್ಕೆ ಪಡೆಯಲಾಗಿದೆ.

ಸಧ್ಯ ನಟಿ ಯೋಗರಾಜ ಭಟ್ ನಿರ್ದೇಶನ ಗಾಳಿಪಟ-2 ಚಿತ್ರದಲ್ಲಿ ನಟಿಸ್ತಿದ್ದಾರೆ. ಇನ್ನೊಂದು ಸಿನ್ಮಾದ ನಿರ್ಮಾಣದಲ್ಲಿದ್ದಾರೆ. ಕರೋನಾದಿಂದಾಗಿ ಇಡೀ ದೇಶ ಲಾಕ್ ಡೌನ್ ಆಗಿದೆ. ಇಂಥಾ ಟೈಂನಲ್ಲಿ ನಟಿಗೆ ಇದೆಲ್ಲ ಬೇಕಿತ್ತಾ ಅಂತಿದ್ದಾರೆ.




Leave a Reply

Your email address will not be published. Required fields are marked *

error: Content is protected !!