ಸಿನಿಮಾ ಬಿಡುಗಡೆ ಬೆನ್ನಲ್ಲೇ ‘ಆದಿಪುರುಷ’ ಬ್ಯಾನ್ ಬಿಸಿ

143

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ನಟ ಪ್ರಭಾಸ್, ನಟಿ ಕೃತಿ ಸನೂನ್, ಸೈಫ್ ಅಲಿ ಖಾನ್ ಸೇರಿ ಬಹುದೊಡ್ಡ ತಾರಾಬಳಗ ಇರುವ ಆದಿಪುರುಷ ಚಿತ್ರಕ್ಕೆ ಇದೀಗ ಬ್ಯಾನ್ ಬಿಸಿ ತಟ್ಟಿದೆ. ಈ ಚಿತ್ರವನ್ನು ನೇಪಾಳದಲ್ಲಿ ಬ್ಯಾನ್ ಮಾಡುವ ಎಚ್ಚರಿಕೆ ನೀಡಲಾಗಿದೆ. ಕಾರಣ, ಸಿನಿಮಾದಲ್ಲಿರುವ ಸೀತೆಯ ಡೈಲಾಗ್.

ಚಿತ್ರದ ನಿರ್ಮಾಪಕ, ನಿರ್ದೇಶಕರಿಗೆ ನೇಪಾಳದ ಕಠ್ಮುಂಡು ಮೇಯರ್ ಬುಲೆಂದ್ರ ಶಾ ಮೂರು ದಿನಗಳ ಟೈಂ ನೀಡಿದ್ದಾರೆ. ಅಷ್ಟರೊಳಗೆ ಸೀತೆಯ ಕುರಿತು ಇರುವ ಡೈಲಾಗ್ ತೆಗೆದು ಹಾಕಬೇಕು. ಇಲ್ಲದಿದ್ದರೆ ಚಿತ್ರ ಬ್ಯಾನ್ ಮಾಡಲಾಗುತ್ತೆ ಎಂದಿದ್ದಾರೆ.

ರಾಮಾಯಣದ ಪ್ರಕಾರ ಸೀತೆ ಜನಿಸಿದ್ದು ಜಾನಕ್ ಪುರದಲ್ಲಿ. ಇದು ಈಗ ನೇಪಾಳದಲ್ಲಿದೆ. ರಾಮ ಇಲ್ಲಿಗೆ ಬಂದು ಸೀತೆಯನ್ನು ಮದುವೆಯಾಗುತ್ತಾನೆ. ಆದರೆ, ಆದಿಪುರುಷ ಚಿತ್ರದಲ್ಲಿ ಸೀತೆ ಭಾರತದ ಮಗಳು ಅನ್ನೋ ಡೈಲಾಗ್ ಇದೆ. ಇದರ ವಿರುದ್ಧ ಕಠ್ಮಂಡು ಮೇಯರ್ ಕಿಡಿ ಕಾರಿದ್ದಾರೆ. ಈ ಡೈಲಾಗ್ ತೆಗೆದು ಹಾಕುವಂತೆ ಎಚ್ಚರಿಕೆ ನೀಡಲಾಗಿದೆ. ಆದಿಪುರುಷ ಚಿತ್ರ ಆರಂಭದಿಂದಲೂ ಒಂದಲ್ಲ ಒಂದು ಕಾರಣಕ್ಕೆ ವಿವಾದವಾಗುತ್ತಿದೆ. ಓಂ ರಾವತ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!