ಅಲೆದಾಟ

1065

ಎಲ್ಲರೊಂದಿಗೆ ಇದ್ದೂ ಒಂಟಿಯಾಗಿ ಬದುಕುವ ಆಸೆ ಅವನಿಗೆ. ಆ ಏಕಾಂಗಿ ಪಯಣದಲ್ಲಿ ಏನನ್ನು ಪಡೆಯುವ ಹಂಬಲ.. ಯಾವುದರಿಂದ ಬಿಡಿಸಿಕೊಳ್ಳುವ ತೊಳಲಾಟ ಅನ್ನೋ ಪ್ರಶ್ನೆಗೆ ಉತ್ತರ ‘ವಿನಯ ನಂದಿಹಾಳ’ ಅವರ ಈ ಕವಿತೆಯಲ್ಲಿದೆ…

ಅಲೆಯುತ್ತೇನೆ

ನನ್ನದಲ್ಲದ ನನ್ನೊಳಗೆ

ನನ್ನ ಹುಡುಕಿಕೊಂಡು

ಅಪರಿಚಿತನಂತೆ

ಅಲೆಯುತ್ತೇನೆ

ಗಂಡಾದ ನಾನು ಹೆಣ್ಣಾಗುವ

ಬಯಕೆಯಿಂದ

ನಿಜ ಹೆಣ್ತನವನ್ನು ಆಗುಮಾಡಿಕೊಂಡು

ಅಲೆಯುತ್ತೇನೆ

ಸಿಗದಿರುವದಡೆಗೆ

ಸಿಗುತ್ತದೆ ಎಂಬ

ಬಯಕೆಯಿಂದಲ್ಲ 

ಅಲೆಯುವ ದಾರಿಯ ಕೊರಳ ಹಂಬಲಕ್ಕಾಗಿ

ಅಲೆಯುತ್ತೇನೆ

ಕಟ್ಟಿರುವ ದಾರಿ

ತೊರೆದು

ಸೃಷ್ಟಿಯ ದಾರಿಯೆಡಗೆ

ಹೌದು

ಅಲಿಯಲೇ ಬೇಕು ನಾನು

ಮಣ್ಣು ನೆತ್ತಿಗೆ ತಾಗುವರೆಗೂ

ಮೊಳಕೆಯೊಡಿಯುವರೆಗೂ

ವಿನಯ ನಂದಿಹಾಳ, ಸಂಶೋಧನಾ ವಿದ್ಯರ್ಥಿ, ಕಲಬುರಗಿ

TAG


Leave a Reply

Your email address will not be published. Required fields are marked *

error: Content is protected !!