ಗಣಿ-ಸಿಂಪಲ್ ಸುನಿ ಕಾಂಬಿನೇಷನ್ ‘ಸಖತ್’

386

ಗೋಲ್ಡನ್ ಸ್ಟಾರ್ ಗಣೇಶ ಹಾಗೂ ನಿರ್ದೇಶಕ ಸಿಂಪಲ್ ಸುನಿ ಇದೀಗ ಮತ್ತೆ ಜೊತೆಯಾಗಿದ್ದಾರೆ. ಈ ಹಿಂದೆ ಚಮಕ್ ಅನ್ನೋ ಸಿನ್ಮಾ ಮಾಡಿ ಸಕ್ಸಸ್ ಕಂಡಿದ್ದ ಯಶಸ್ವಿ ಜೋಡಿ ಈಗ ಮತ್ತೊಂದು ಚಿತ್ರವನ್ನ ಮಾಡ್ತಿದೆ.

ನಟ ಗಣೇಶ ಹಾಗೂ ಸುನಿ ಕಾಂಬಿನೇಷನ್ ಚಿತ್ರಕ್ಕೆ ‘ಸಖತ್’ ಅನ್ನೋ ಟೈಟಲ್ ಇಡಲಾಗಿದೆ. ಇದರ ಪೂಜಾ ಕಾರ್ಯಕ್ರಮ ಇತ್ತೀಚೆಗೆ ನಡೆದಿದೆ. ಇದರಲ್ಲಿ ಚಿತ್ರತಂಡ ಭಾಗವಹಿಸಿತ್ತು. ಗಣಿಗೆ ಸುರಭಿ ಅನ್ನೋ ನಟಿ ಜೋಡಿಯಾಗಿ ಕಾಣಿಸಿಕೊಳ್ತಿದ್ದಾರೆ.

ಭರಾಟೆ ಮೂವಿ ನಿರ್ಮಾಣ ಮಾಡಿದ್ದ ಸುಪ್ರೀತ ಸಖತ್ ಮೂವಿ ನಿರ್ಮಿಸ್ತಿದ್ದಾರೆ. ನಿರ್ದೇಶಕ ಸಿಂಪಲ್ ಸುನಿ ಅವತಾರ ಪುರುಷ ಚಿತ್ರದಲ್ಲಿ ಒಂದಿಷ್ಟು ಬ್ಯುಸಿಯಿದ್ದು, ಇದು ಮುಗಿಯುತ್ತಿದ್ದಂತೆ ಸಖತ್ ಮೂವಿಯ ಶೂಟಿಂಗ್ ಕೆಲಸಗಳು ನಡೆಯಲಿವೆ.




Leave a Reply

Your email address will not be published. Required fields are marked *

error: Content is protected !!