ಮಹಿಳೆಯರ ಒಳ ಉಡುಪುಗಳ ಮೇಲೆ ಕನ್ನಡದ ಬಾವುಟ: ಎಲ್ಲೆಡೆ ಆಕ್ರೋಶ

259

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕೇವಲ ಎರಡು ದಿನಗಳ ಹಿಂದೆ ಗೂಗಲ್ ನಲ್ಲಿ ಕನ್ನಡ ಭಾಷೆಯನ್ನ ಕೊಳಕು ಭಾಷೆ ಎಂದು ತೋರಿಸಲಾಗಿತ್ತು. ಇದರ ವಿರುದ್ಧ ಎಲ್ಲೆಡೆ ಆಕ್ರೋಶ ವ್ಯಕ್ತವಾದ ಬಳಿಕ, ಅದನ್ನು ತೆಗೆದು ಹಾಕಿ ಕ್ಷಮೆ ಕೇಳಿತು. ಈಗ ಆನ್ಲೈನ್ ಮಾರಾಟ ತಾಣವಾದ ಅಮೆಜಾನ್ ನಲ್ಲಿ ಮಹಿಳೆಯರ ಒಳಉಡುಪುಗಳ ಮೇಲೆ ಕನ್ನಡದ ಬಾವುಟ ಚಿತ್ರಿಸಲಾಗಿದೆ.

ಕೆನಡಾದ ಅಮೆಜಾನ್ ಸಂಸ್ಥೆ ವಿರುದ್ಧ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್ ನಾಗಾಭರಣ ಅವರು, ಅಮೆಜಾನ್ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವ ಅಗತ್ಯವಿದೆ ಎಂದಿದ್ದಾರೆ.

ಇನ್ನು ಟ್ವೀಟರ್ ನಲ್ಲಿ ದೊಡ್ಡ ಅಭಿಯಾನ ಶುರುವಾಗಿದ್ದು, ಅಮೆಜಾನ್ ಕನ್ನಡಿಗರ ಕ್ಷಮೆ ಕೇಳಬೇಕು. ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಅನ್ನೋ ಕೂಗು ವ್ಯಕ್ತವಾಗಿದೆ.




Leave a Reply

Your email address will not be published. Required fields are marked *

error: Content is protected !!