ಅನುಷ್ಕಾ ಮೌನಕ್ಕೆ ಶರಣಾಗಿದ್ದಾಳೆ…

417

ಕಾಲಿವುಡ್ ನಟಿ ಅನುಷ್ಕಾ ಶೆಟ್ಟಿ ಇದೀಗ ಸಂಪೂರ್ಣವಾಗಿ ಮೌನಕ್ಕೆ ಜಾರಿದ್ದಾಳೆ ಎನ್ನಲಾಗ್ತಿದೆ. ದಪ್ಪಗಾಗಿದ್ದ ಕಾರಣಕ್ಕೆ ಹಲವು ಆಫರ್ ಗಳಿಂದ ವಂಚಿತಳಾಗಿದ್ದಳು ನಟಿ ಅನುಷ್ಕಾ ಶೆಟ್ಟಿ. ಹೀಗಾಗಿ ಫ್ಯಾರಿನ್ ಗೆ ಹೋಗಿ ತೆಳ್ಳಗಾಗುವ ಎಲ್ಲ ಪ್ರಯತ್ನಗಳನ್ನ ಮಾಡಿಕೊಂಡು ಬಂದಿದ್ಳು.

ಬಾಹುಬಲಿ ಸಿನ್ಮಾದಲ್ಲಿ ಒಂದಿಷ್ಟು ಸ್ಲಿಮ್ ಆಗಿ ಕಾಣಿಸಿಕೊಂಡಿದ್ಳು. ಅದಾದ್ಮೇಲೆ ನಟಿ ಅನುಷ್ಕಾಗೆ ಮತ್ಯಾವುದೆ ಸಿನ್ಮಾಗಳಿಂದ ಹೇಳಿಕೊಳ್ಳುವಂತಾ ಪಾತ್ರಗಳು ಬಂದಿರ್ಲಿಲ್ಲ. ಹೀಗಾಗಿ ಅನುಷ್ಕಾ ಸೈಲೆನ್ಸ್ ಆಗಿದ್ದಾಳೆ ಅನ್ನೋದು ಸಿನ್ಮಾ ಮಂದಿ ಮಾತು. ಇದನ್ನ ಕೇಳಿ ಶಾಕ್ ಆಗ್ಬೇಡಿ. ಯಾಕಂದ್ರೆ ನಟಿ ಅನುಷ್ಕಾ ಸೈಲೆನ್ಸ್ ಅನ್ನೋ ಮೂವಿಯಲ್ಲಿ ನಟಿಸ್ತಿದ್ದು, ಅದರಲ್ಲಿ ಮಾತು ಬಾರದ ಸಾಕ್ಷಿ ಅನ್ನೋ ಯುವತಿಯ ಪಾತ್ರ ಮಾಡ್ತಿದ್ದಾರೆ.

ಇಂಗ್ಲಿಷ್, ಹಿಂದಿ, ತೆಲುಗು, ತಮಿಳು ಹಾಗೂ ಮಲಿಯಾಳಂನಲ್ಲಿ ಸಿನ್ಮಾ ರಿಲೀಸ್ ಆಗ್ತಿದೆ. ನಟ ಮಾಧವನ ಸೇರದಂತೆ ಅನೇಕ ನಟ, ನಟಿಯರು ಇದರಲ್ಲಿ ಕಾಣಿಸಿಕೊಳ್ತಿದ್ದಾರೆ. ಹೀಗಾಗಿ ನಟಿ ಸದ್ಯ ಮಾತ್ನಾಡುವ ಸ್ಥಿತಿಯಲ್ಲಿ ಇಲ್ಲ.




Leave a Reply

Your email address will not be published. Required fields are marked *

error: Content is protected !!