‘ಸ್ವೀಟಿ’ ಬಣದ ಲೋಕಕ್ಕೆ ಬಂದು 15 ವರ್ಷ

492

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಸೌಥ್ ಸಿನಿ ದುನಿಯಾದ ಸ್ಟಾರ್ ನಟಿ, ಕನ್ನಡತಿ ಅನುಷ್ಕಾ ಶೆಟ್ಟಿ ಸಿನಿಮಾ ಕರಿಯರ್ ಶುರು ಮಾಡಿ 15 ವರ್ಷಗಳು ಕಳೆದಿವೆ. ಚಿತ್ರ ರಸಿಕರ ಪಾಲಿನ ಸ್ವೀಟಿ, ಗ್ಲಾಮರ್ ಪಾತ್ರದಿಂದ ಹಿಡಿದು ಡಿಗ್ಲಾಮರ್ ಪಾತ್ರಗಳನ್ನೂ ಮಾಡಿ ಸೈ ಎನಿಸಿಕೊಂಡರು.

ಯೋಗ ಟೀಚರ್ ಆಗಿದ್ದ ಅನುಷ್ಕಾ ಶೆಟ್ಟಿ, ಸಿನಿ ಕರಿಯರ್ ಶುರು ಮಾಡಿದ್ದು 2005ರಲ್ಲಿ. ಸ್ಟಾರ್ ನಟ ನಾಗಾರ್ಜುನ ಜೊತೆ ಸೂಪರ್ ಚಿತ್ರದ ಮೂಲಕ ಚಿತ್ರಲೋಕಕ್ಕೆ ಕನ್ನಡತಿಯ ಆಗಮನವಾಯ್ತು. ಅಲ್ಲಿಂದ ಲಕ್ಷ್ಯಂ, ಸೂರ್ಯಂ, ವಾನಂ, ವಿಕ್ರಮವಾರ್ಕುಡು, ಅರುಂಧತಿ, ಬಾಹುಬಲಿ, ಡಾನ್, ಒಕ್ಕ ಮಗಾಡು ಸೇರಿದಂತೆ ಟಾಲಿವುಡ್, ಕಾಲಿವುಡ್ ನಲ್ಲಿ ಸೂಪರ್ ಸ್ಟಾರ್ ನಟರ ಜೊತೆ ಸ್ಕ್ರೀನ್ ಶೇರ್ ಮಾಡುತ್ತಾ ಸ್ಟಾರ್ ನಟಿಯಾದ್ಳು.

ಸಾಕಷ್ಟು ಸೂಪರ್ ಹಿಟ್ ಚಿತ್ರಗಳನ್ನ ನೀಡಿದ ನಟಿ ಅನುಷ್ಕಾ ಶೆಟ್ಟಿ, ಜೀರೋ ಸೈಜ್ ಚಿತ್ರಕ್ಕಾಗಿ ದೇಹದ ತೂಕ ಹೆಚ್ಚಿಸಿಕೊಂಡ್ಳು. ನಂತರ ಅದನ್ನ ಕರಗಿಸಲು ಸಾಕಷ್ಟು ಕಷ್ಟಪಟ್ಟಳು. ಹೀಗಾಗಿ ಕೆಲ ಸಿನಿಮಾಗಳಿಂದ ದೂರು ಉಳಿದ್ಳು. ಪ್ರೇಕ್ಷಕರು ಸ್ವೀಟಿ ಸಿನಿಮಾದಿಂದ ದೂರವಾಗ್ತಿದ್ದಾಳೆ ಅನ್ನೋದರ ನಡುವೆ ಸೈಲೆನ್ಸ್ ಅನ್ನೋ ಸಿನಿಮಾ ಬರ್ತಿದೆ. ಮೊದಲ ಬಾರಿಗೆ ಮೂಕಿಯಾಗಿ ನಟಿಸಿದ್ದು, ಒಟಿಟಿಯಲ್ಲಿ ರಿಲೀಸ್ ಆಗ್ತಿದೆ.

38ರ ಚೆಲುವೆ ಹಾಗೂ ನಟ ಪ್ರಭಾಸ ನಡುವೆ ಲವ್ವಿ ಡವ್ವಿ ಇದೆ. ಇವರಿಬ್ಬರು ಮದ್ವೆಯಾಗ್ತಾರೆ ಎಂದೆಲ್ಲ ಹೇಳಲಾಯ್ತು. ಆದ್ರೆ, ನಟಿ ಅನುಷ್ಕಾ ಶೆಟ್ಟಿ ಇದನ್ನ ಅಲ್ಲಗೆಳೆದಿದ್ದಾಳೆ. ಹೀಗಾಗಿ ಯಾರನ್ನ ಮದ್ವೆಯಾಗ್ತಾಳೆ ಅನ್ನೋ ಕುತೂಹಲವಿದೆ.




Leave a Reply

Your email address will not be published. Required fields are marked *

error: Content is protected !!