ಬೈಕ್ ವೀರರೆ ಹುಷಾರ್: ನಿಮ್ಮ ಗಾಡಿಯೂ ಠಾಣೆ ಸೇರುತ್ತೆ

534

ಅಥಣಿ: ಲಾಕ್ ಡೌನ್ ಸಂದರ್ಭದಲ್ಲಿ ಅನಗತ್ಯವಾಗಿ ತಿರುಗಾಡಬೇಡಿ ಎಂದು ಎಷ್ಟು ಹೇಳಿದ್ರೂ ಕೆಲವರು ಕೇಳುತ್ತಿಲ್ಲ. ಸುಖಾಸುಮ್ಮನೆ ಬೈಕ್ ತೆಗೆದುಕೊಂಡು ಸಿಟಿಯಲ್ಲಿ ತಿರುಗಾಡ್ತಿದ್ದಾರೆ. ಇದ್ರಿಂದಾಗಿ ಬೆಳಗಾವಿ ಜಿಲ್ಲೆ ಅಥಣಿ ಪಟ್ಟಣದಲ್ಲಿ ಪೊಲೀಸರು ಈ ರೋಡ್ ರಾಜಾಗಳಿಗೆ ತಕ್ಕ ಪಾಠ ಕಲಿಸ್ತಿದ್ದಾರೆ.

ಲಾಕ್ ಡೌನ್ ಕಾಯ್ದೆ ಉಲ್ಲಂಘಿಸಿ ಅನಗತ್ಯವಾಗಿ ಪಟ್ಟಣದಲ್ಲಿ ದ್ವಿಚಕ್ರ ವಾಹನದ ಮೇಲೆ ತಿರುಗಾಡುವವರಿಗೆ ಲಾಠಿ ಬೀಸುವ ಬದಲು, ಅವರ ಬೈಕ್ ಗಳನ್ನ ವಶಕ್ಕೆ ಪಡೆಯುತ್ತಿದ್ದಾರೆ. ಈಗಾಗ್ಲೇ 40ಕ್ಕಿಂತ ಹೆಚ್ಚು ಬೈಕ್ ಗಳು ಠಾಣೆಯ ಆವರಣದಲ್ಲಿ ತುಂಬಿಕೊಂಡಿವೆ.

ಅನಗತ್ಯವಾಗಿ ಓಡಾಡುವವರ ಬೈಕ್ ಗಳನ್ನ ಪೋಲಿಸರು ವಶಪಡಿಸಿಕೊಂಡು ಲಾಕ್ ಮಾಡಿದ್ದಾರೆ. ವಶಕ್ಕೆ ಪಡೆದಿರುವ ದ್ವಿಚಕ್ರ ವಾಹನಗಳನ್ನ ಲಾಕ್ ಡೌನ್ ಮುಗಿಯುವವರೆಗೂ ಅವರಿಗೆ ಹಸ್ತಾಂತರಿಸದಿರಲು ನಿರ್ಧರಿಸಿದ್ದಾರೆ. ಈ ಮೂಲಕ ಪುಂಡ ಪೋಕರಿಗಳಿಗೆ ಸರಿಯಾಗಿ ಬಿಸಿ ಮುಟ್ಟಿಸ್ತಿದ್ದಾರೆ.


TAG


Leave a Reply

Your email address will not be published. Required fields are marked *

error: Content is protected !!