ಏ.14ರ ಬಳಿಕವೂ ಲಾಕ್ ಡೌನ್ ವದಂತಿ: ಕೇಂದ್ರ ಹೇಳಿದ್ದೇನು?

409

ನವದೆಹಲಿ: ಇಡೀ ದೇಶ ಏಪ್ರಿಲ್ 14ರ ತನಕ ಲಾಕ್ ಡೌನ್ ಆಗಿದೆ. ಇದು ಇನ್ನು ಮುಂದುವರೆಯುತ್ತೆ ಅನ್ನೋ ಗಾಳಿ ಸುದ್ದಿ ಎಲ್ಲೆಡೆ ಹರಿದಾಡ್ತಿದೆ. ಇದಕ್ಕೆ ಸ್ಪಷ್ಟನೆ ನೀಡಿರುವ ಕೇಂದ್ರ ಸರ್ಕಾರ, ಏಪ್ರಿಲ್ 14ರ ಬಳಿಕ ಲಾಕ್ ಡೌನ್ ಮುಂದುವರೆಸಲ್ಲ ಎಂದಿದೆ.

ಈ ಬಗ್ಗೆ ಕ್ಯಾಬಿನೆಟ್ ಕಾರ್ಯದರ್ಶಿ ರಾಜೀವ ಗೌಬ್, ಏಪ್ರಿಲ್ 14ರ ಬಳಿಕವೂ ಲಾಕ್ ಡೌನ್ ಮುಂದುವರೆಯುತ್ತೆ ಅನ್ನೋದು ಸತ್ಯಕ್ಕೆ ದೂರದ ಮಾತು ಎಂದಿದ್ದಾರೆ. ಇದನ್ನ ಕೇಳಿ ನನ್ಗೆ ಅಚ್ಚರಿಯಾಗಿದೆ. ಇಂಥಾ ಯಾವುದೇ ನಿರ್ಧಾರ ಸರ್ಕಾರದ ಮುಂದೆಯಿಲ್ಲವೆಂದು ಸ್ಪಷ್ಟ ಪಡಿಸಿದ್ದಾರೆ.

ಕ್ಯಾಬಿನೆಟ್ ಕಾರ್ಯದರ್ಶಿ ರಾಜೀವ ಗೌಬ್

ಮಾರ್ಚ್ 25 ರಿಂದ ಏಪ್ರಿಲ್ 14ರ ತನಕ ದೇಶ ಲಾಕ್ ಡೌನ್ ಎಂದು ಪ್ರಧಾನಿ ಘೋಷಿಸಿದ್ರು. ಇದು ಈಗಾಗ್ಲೇ ಒಂದು ವಾರವಾಗಿದೆ. ಇದರ ನಡುವೆ ದೇಶದಲ್ಲಿ ಕರೋನಾ ಸೋಂಕಿತರ ಸಂಖ್ಯೆ ಏರುತ್ತಿದೆ. ಹೀಗಾಗಿ ಏಪ್ರಿಲ್ 14ರ ಬಳಿಕ ಲಾಕ್ ಡೌನ್ ಮುಂದುವರೆಯುತ್ತೆ ಅನ್ನೋ ವದಂತಿ ಎಲ್ಲೆಡೆ ಹರಿದಾಡ್ತಿದೆ. ಹೀಗಾಗಿ ಕೇಂದ್ರದಿಂದ ಮುಂದುವರೆಯುವದಿಲ್ಲ ಅನ್ನೋ ಸ್ಪಷ್ಟನೆ ಸಿಕ್ಕಿದೆ.




Leave a Reply

Your email address will not be published. Required fields are marked *

error: Content is protected !!