ಲ್ಯಾಬುಶೆನ್ ಡಬಲ್ ಸೆಂಚುರಿ.. ಆಸೀಸ್ 454ಕ್ಕೆ ಆಲೌಟ್

371

ಸಿಡ್ನಿ: ಲ್ಯಾಬುಶೆನ್ ಡಬಲ್ ಸೆಂಚುರಿ ನೆರವಿನಿಂದ ಆಸೀಸ್ ಟೀಂ ಕೀವಿಸ್ ವಿರುದ್ಧದ 3ನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ 454 ರನ್ ಬಾರಿಸಿದೆ. ಇಂದು 2ನೇ ದಿನದಾಟದ ಟೀ ಬ್ರೇಕ್ ವೇಳೆಯಷ್ಟರಲ್ಲಿ ಆಸ್ಟ್ರೇಲಿಯಾ ಎಲ್ಲ ವಿಕೆಟ್ ಕಳೆದುಕೊಂಡಿತು. ಮಾರ್ನಸ್ ಲ್ಯಾಬುಶೆನ್ ಟೆಸ್ಟ್ ವೃತ್ತಿ ಬದುಕಿನಲ್ಲಿ 215ರನ್ ಗಳಿಸಿದ್ದು ಗರಿಷ್ಠ ಸ್ಕೋರ್ ಆಗಿದೆ.

ಕ್ಯಾಪ್ಟನ್ ಟಿಮ್ ಪೈನ್ ಕೇವಲ 35 ರನ್ ಬಾರಿಸಿದ. ಮೊದಲ ಟೀ ಬ್ರೇಕ್ ಗೂ ಮೊದ್ಲು ನ್ಯೂಜಿಲೆಂಡ್ ನಡೆಸಿದ ಮಾರಕ ದಾಳಿಗೆ ವಿಕೆಟ್ ಗಳು ಪಟಪಟನೆ ಉರುಳಿದ್ವು. ಜೇಮ್ಸ್ ಪ್ಯಾಟಿನ್ಸನ್ 2, ಕಮಿನ್ಸ್ 8, ಮಿಚಲ್ ಸ್ಟಾರ್ಕ್ 22 ರನ್ ಗಳಿಸಿ ಔಟ್ ಆದ್ರು.

ನ್ಯೂಜಿಲೆಂಡ್ ಪರ ಗ್ರಾಂಡ್ ಹೋಮ್ 3 ಹಾಗಾ ವಾಗ್ನರ್ 3 ವಿಕೆಟ್ ಪಡೆದು ಮಿಂಚಿದ್ರು. ಇನ್ನಿಂಗ್ಸ್ ಶುರು ಮಾಡಿರುವ ನ್ಯೂಜಿಲೆಂಡ್ ಟೀಂ ವಿಕೆಟ್ ನಷ್ಟವಿಲ್ಲದೆ 55 ರನ್ ಗಳಿಸಿದೆ. ತಲಿಮ್ 24 ಹಾಗೂ ಬಂಲ್ಡೆಲ್ 28 ರನ್ ಗಳೊಂದಿಗೆ ಆಟವಾಡ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!