ಜೈ ಭೀಮ್ ಚಿತ್ರಕ್ಕೆ ಸಿಗದ ಪ್ರಶಸ್ತಿ, ಹಲವರ ಬೇಸರ

241

ಪ್ರಜಾಸ್ತ್ರ ಸಿನಿಮಾ ಡೆಸ್ಕ್

69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಗುರುವಾರ ಸಂಜೆ ಘೋಷಣೆಯಾಗಿದೆ. ಇದಕ್ಕೆ ಸಂಬಂಧಿಸಿದಂತೆ ಕೆಲವರಿಗೆ ಖುಷಿಯಾಗಿದೆ. ಇನ್ನು ಕೆಲವರಿಗೆ ಬೇಸರವಾಗಿದೆ. ಅದರಲ್ಲೂ 2020ರ ಸೂಪರ್ ಹಿಟ್ ಜೈ ಭೀಮ್ ಚಿತ್ರಕ್ಕೆ ಒಂದೇ ಒಂದು ಪ್ರಶಸ್ತಿ ಬಂದಿಲ್ಲ. ಇದು ಅನೇಕರಿಗೆ ಅಚ್ಚರಿ ತಂದಿದೆ.

1990ರಲ್ಲಿ ತಮಿಳುನಾಡಿನಲ್ಲಿ ಬುಡಕಟ್ಟು ಸಮಾಜದ ನೈಜ ಕಥೆಯಾಗಿದೆ. ಭಯಾನಕ ಸತ್ಯವನ್ನು ಹೊರಗೆ ತರಲು ವಕೀಲ ಚಂದ್ರು ನಡೆಸಿದ ಹೋರಾಟದ ಕಥೆಯ ಚಿತ್ರ ನೋಡಿದ ಪ್ರತಿಯೊಬ್ಬರು ಜೈ ಭೀಮ್ ಎಂದಿದ್ದರು. ಸಂವಿಧಾನಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕಾನೂನಿನ ತಾಕತ್ತು ಏನು ಅನ್ನೋದು ಸಾರುವ ಚಿತ್ರವಿದು. ಇದರಲ್ಲಿ ವಕೀಲ ಚಂದ್ರು ಪಾತ್ರವನ್ನು ನಟ ಸೂರ್ಯ ಅದ್ಭುತವಾಗಿ ನಿರ್ವಹಿಸಿದ್ದರು. ಇಂತಹ ಚಿತ್ರಕ್ಕೆ ಒಂದೇ ಒಂದು ರಾಷ್ಟ್ರೀಯ ಪ್ರಶಸ್ತಿ ಬರದಿದ್ದಕ್ಕೆ ನಟ ನಾನಿ, ಒಡೆದ ಹೃದಯದ ಇಮೋಜಿ ಹಾಕಿ ಜೈ ಭೀಮ್ ಎಂದಿದ್ದಾರೆ.

ಅತ್ಯುತ್ತಮ ಚಿತ್ರ, ಅತ್ಯುತ್ತಮ ನಟ ವರ್ಗದಲ್ಲಿ ನಾಮನಿರ್ದೇಶನಗೊಂಡಿದ್ದರು. ಆದರೆ, ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಗಿದ್ದು, ಇದಕ್ಕೆ ಅನೇಕರು ಬೇಸರ ವ್ಯಕ್ತಪಡಿಸಿದ್ದಾರೆ. ಸಮಾಜವನ್ನು ತಪ್ಪು ದಾರಿಗೆ ಎಳೆಯುವ ಕಥೆ ಹೊಂದಿದ ಚಿತ್ರಗಳಿಗೆ, ನಟರಿಗೆ ಪ್ರಶಸ್ತಿ ನೀಡಲಾಗಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರ ಹಾಕುತ್ತಿದ್ದಾರೆ. ಅದೇನೆ ಇರಲಿ ಕಾನೂನಿನ ಶಕ್ತಿ ಏನೆಂದು ತೋರಿದ ಶ್ರೇಷ್ಠ ಚಿತ್ರಕ್ಕೆ ಒಂದೇ ಒಂದು ಪ್ರಶಸ್ತಿ ಬರದೆ ಹೋಗಿರುವುದು ನಿಜಕ್ಕೂ ದುರಂತ.




Leave a Reply

Your email address will not be published. Required fields are marked *

error: Content is protected !!