ಕಪಾಳಮೋಕ್ಷದ ಬಗ್ಗೆ ಪ್ರಕಾಶ್ ರೈ ಹೇಳಿದ್ದೇನು?

240

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಈ ಬಾರಿ ಒಟಿಟಿಯಲ್ಲಿ ತೆರೆ ಕಂಡಿರುವ ಜೈ ಭೀಮ್ ಚಿತ್ರ ಭರ್ಜರಿಯಾಗಿ ಓಡುತ್ತಿದೆ. ಸಿನಿಮಾ ನೋಡಿದ ಪ್ರತಿಯೊಬ್ಬರು ಜೈ ಭೀಮ್ ಚಿತ್ರ ತಂಡಕ್ಕೆ ಮೆಚ್ಚುಗೆ ವ್ಯಕ್ತಪಡಿಸುವುದರ ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದರ ನಡುವೆ, ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿರುವ ನಟ ಪ್ರಕಾಶ್ ರೈ, ಚಿನ್ನದಂಗಡಿ ವ್ಯಾಪಾರಿಗೆ ಕಪಾಳಮೋಕ್ಷ ಮಾಡಿದ್ದನ್ನು ಕೆಲವರು ವಿರೋಧಿಸುತ್ತಿದ್ದಾರೆ.

ಚಿನ್ನದ ವ್ಯಾಪಾರಿ ತನಿಖೆಗೆ ಸಂಬಂಧಿಸಿದಂತೆ ಮಾತನಾಡುವಾಗ ಹಿಂದಿಯಲ್ಲಿ ಮಾತನಾಡುತ್ತಾನೆ. ಈ ವೇಳೆ ಅವನ ಕಪಾಳಕ್ಕೆ ಹೊಡೆಯುವ ಪೊಲೀಸ್ ಅಧಿಕಾರಿಯಾಗಿ ಪ್ರಕಾಶ್ ರೈ, ಕನ್ನಡದಲ್ಲಿ ಮಾತನಾಡು ಅಂತಾರೆ. ಇದನ್ನು ಇಟ್ಟುಕೊಂಡು ಹಿಂದಿ ವಿರೋಧಿಯ ಕಾರ್ಯಸೂಚಿಯಾಗಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಟೀಕೆ ಮಾಡಲಾಗುತ್ತಿದೆ.

ಈ ಬಗ್ಗೆ ಮಾತನಾಡಿರುವ ನಟ ಪ್ರಕಾಶ್ ರೈ, ಹೀಗೆ ಟೀಕೆ ಮಾಡುವವರ ಅಜೆಂಡ್ ಏನು ಅನ್ನೋದು ತಿಳಿಯುತ್ತೆ. ಚಿತ್ರ ನೋಡಿದ ಮೇಲೂ ಬುಡಕಟ್ಟು ಜನಾಂಗದ ಸಂಕಟ, ನೋವು, ಅನ್ಯಾಯ ಇವರಿಗೆ ಕಾಣಿಸಲಿಲ್ಲ. ಇದರಿಂದ ಭಯ ಪಡಲಿಲ್ಲ. ಇವರಿಗೆ ಕಪಾಳಮೋಕ್ಷವೊಂದೇ ಕಾಣಿಸಿತು ಎಂದು ಕಿಡಿ ಕಾರಿದ್ದಾರೆ.




Leave a Reply

Your email address will not be published. Required fields are marked *

error: Content is protected !!