ಘೋಸ್ಟ್ ರಿಲೀಸ್ ಡೇಟ್ ಫಿಕ್ಸ್, ಶಿವಣ್ಣ ಫ್ಯಾನ್ಸ್ ಫುಲ್ ಖುಷ್

213

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ರಜನಿಕಾಂತ್ ನಟನೆಯ ಜೈಲರ್ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡ ಸ್ಯಾಂಡಲ್ ವುಡ್ ಸ್ಟಾರ್ ಶಿವಣ್ಣ, ಎಲ್ಲೆಡೆ ಧೂಳೆಬ್ಬಿಸಿದ್ದಾರೆ. ಅವರ ಅಭಿನಯ ನೋಡಿದ ಮಂದಿ ಹುಚ್ಚೆದ್ದು ಕುಣಿಯುತ್ತಿದ್ದಾರೆ. ಈ ಖುಷಿಯ ನಡುವೆ ಘೋಸ್ಟ್ ಚಿತ್ರ ಬಿಡುಗಡೆಯ ದಿನಾಂಕ ಘೋಷಿಸಲಾಗಿದೆ.

ನಟ, ನಿರ್ದೇಶಕ ಶ್ರೀನಿ, ಘೋಸ್ಟ್ ಚಿತ್ರ ನಿರ್ದೇಶನ ಮಾಡುತ್ತಿದ್ದು ಸಿಕ್ಕಾಪಟ್ಟೆ ಕ್ರೇಜ್ ಕ್ರಿಯೇಟ್ ಮಾಡಿದೆ. ಪೋಸ್ಟರ್ ಗಳು ಈಗಾಗ್ಲೇ ಸಾಕಷ್ಟು ಕುತೂಹಲ ಮೂಡಿಸಿವೆ. ವರಮಹಾಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ರಿಲೀಸ್ ಡೇಟ್ ಹೇಳಿದ್ದು, ಅಕ್ಟೋಬರ್ 19ಕ್ಕೆ ವರ್ಲ್ಡ್ ವೈಡ್ ರಿಲೀಸ್ ಆಗುತ್ತಿದೆ.

ಸಂದೇಶ್ ಪ್ರೊಡೆಕ್ಷನ್ಸ್ ಅಡಿಯಲ್ಲಿ ಘೋಸ್ಟ್ ರೆಡಿಯಾಗುತ್ತಿದೆ. ಜಯರಾಂ, ಅನುಪಮ್ ಖೇರ್, ಸತ್ಯಪ್ರಕಾಶ್, ದತ್ತಣ್ಣ, ಅಭಿಜಿತ್ ಸೇರಿ ಅನೇಕರು ಕಾಣಿಸಿಕೊಂಡಿದ್ದಾರೆ. ಶಿವಣ್ಣನಿಗೆ ಜೋಡಿಯಾಗಿದ್ದು ಯಾರು ಅನ್ನೋದು ಇನ್ನು ತಿಳಿದು ಬಂದಿಲ್ಲ. ಮೂರು ಭಾಷೆಯಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ.




Leave a Reply

Your email address will not be published. Required fields are marked *

error: Content is protected !!