ಭೈರತಿ ರಣಗಲ್ ಆಗಮನಕ್ಕೆ ಡೇಟ್ ಫಿಕ್ಸ್

173

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಮಫ್ತಿ ಸಿನಿಮಾದಲ್ಲಿ ನಟ ಶಿವರಾಜಕುಮಾರ್ ಭೈರತಿ ರಣಗಲ್ ರೋಲ್ ನಲ್ಲಿ ಮಿಂಚಿದ್ದರು. ಆ ಪಾತ್ರ ಅವರ ಸಿನಿ ಕರಿಯರ್ ನಲ್ಲಿ ಹೊಸ ಇಮೇಜ್ ನೀಡಿತು. ಆ ಪಾತ್ರದ ಹೆಸರಿನಲ್ಲೇ ಸಿನಿಮಾ ಸಿದ್ಧವಾಗಿದ್ದು, ತೆರೆಗೆ ಬರಲು ಸಜ್ಜಾಗಿದೆ.

ಮಫ್ತಿ ಚಿತ್ರವನ್ನು ನಿರ್ದೇಶನ ಮಾಡಿದ್ದ ನರ್ತನ್ ಅವರೇ ಭೈರತಿ ರಣಗಲ್ ಸಿನಿಮಾ ಮಾಡಿದ್ದಾರೆ. ಭಾನುವಾರ ಸಿನಿಮಾ ರಿಲೀಸ್ ಡೇಟ್ ಹೇಳಲಾಗಿದೆ. ಆಗಸ್ಟ್ 15, 2024ರಂದು ಬಿಗ್ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುವ ಮೂಲಕ ಸ್ವತಂತ್ರ್ಯ ದಿನವನ್ನು ಭರ್ಜರಿಯಾಗಿ ಆಚರಿಸಲು ಪ್ಲಾನ್ ಮಾಡಲಾಗಿದೆ.

ಶಿವಣ್ಣ ತಮ್ಮ ಸಂಸ್ಥೆಯ ಮೂಲಕ ಭೈರತಿ ರಣಗಲ್ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಮಫ್ತಿ ಚಿತ್ರದ ಮೊದಲ ಭಾಗದ ಕಥೆಯನ್ನು ಇದು ಹೇಳಲಿದೆ. ನಟ ಶ್ರೀಮುರಳಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದರು. ಅವರ ರೋಲ್ ಇದರಲ್ಲಿ ಇರುತ್ತಾ ಅನ್ನೋ ಕುತೂಹಲವಿದೆ. ಇಂದು ಸಂಜೆ 6 ಗಂಟೆಗೆ ಮಾಧ್ಯಮಗೋಷ್ಠಿ ನಡೆಸುತ್ತಿದ್ದು, ಹಲವು ವಿಚಾರಗಳು ರಿವೀಲ್ ಆಗಲಿವೆ.




Leave a Reply

Your email address will not be published. Required fields are marked *

error: Content is protected !!