ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಸೆಂಚುರಿ ಸ್ಟಾರ್ ಶಿವರಾಜಕುಮಾರ್ ನಟನೆಯ ಘೋಸ್ಟ್ ಸಿನಿಮಾ ಅಭಿಮಾನಿಗಳಿಗೆ, ಸಿನಿ ರಸಿಕರಿಗೆ ಕಿಕ್ ಮೇಲೆ ಕಿಕ್ ಕೊಡುತ್ತಿದೆ. ನಿರ್ದೇಶಕ ಶ್ರೀನಿ, ಶಿವಣ್ಣ ಅಭಿಮಾನಿಗಳಲ್ಲಿ ಸಿಕ್ಕಾಪಟ್ಟೆ ಕ್ರೇಜ್ ಕ್ರಿಯೇಟ್ ಮಾಡುತ್ತಿದ್ದು, ಅದಕ್ಕೆ ಸಾಕ್ಷಿ ಎಂಬಂತೆ ಶುಕ್ರವಾರ ಒಜಿಎಂ ರಿಲೀಸ್ ಮಾಡಲಾಗಿದೆ.
ಒಂದು ಹಾಡಿನಲ್ಲಿ ಕನ್ನಡ, ತೆಲುಗು, ತಮಿಳು, ಮಲಿಯಾಳಂ, ಇಂಗ್ಲಿಷ್ ಲಿರಿಕ್ಸ್ ಮೂಲಕ ಹೊಸತನದಿಂದ ತೋರಿಸಲಾಗಿದೆ. ಶಿವಣ್ಣನ ಹೊಸ ಮಾಸ್ ಲುಕ್ ನೋಡಿದ ಫ್ಯಾನ್ಸ್ ಎಲ್ಲೆಲ್ಲೂ ಶಿವಣ್ಣನ ಹವಾ ಎನ್ನುತ್ತಿದ್ದಾರೆ.
ಕನ್ನಡ ಸಾಹಿತ್ಯವನ್ನು ಚಿರಂಜೀವಿ, ತಮಿಳು, ತೆಲುಗು ರ್ಯಾಪ್ ಸಾಹಿತ್ಯ ಎಂಸಿ ಚೇತನ್, ಮಲಿಯಾಳಂ ಸಾಹಿತ್ಯ ರಾಜೇಶ್ ಬರೆದಿದ್ದಾರೆ. ಗಾಯಕರು ಸಹ ಬೇರೆ ಬೇರೆಯಾಗಿದ್ದಾರೆ. ಅರ್ಜುನ್ ಜನ್ಯ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಸಂದೇಶ ಪ್ರೊಡೆಕ್ಷನ್ ನಿರ್ಮಾಣದ ಜವಾಬ್ದಾರಿ ಹೊತ್ತಿದೆ. ಅಕ್ಟೋಬರ್ 22ಕ್ಕೆ ವರ್ಲ್ಡ್ ವೈಡ್ ಸಿನಿಮಾ ರಿಲೀಸ್ ಆಗುತ್ತಿದೆ.