ಘೋಸ್ಟ್ ಅಬ್ಬರ.. ಶಿವಣ್ಣ ಫ್ಯಾನ್ಸ್ ಆರ್ಭಟ..

168

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಸೆಂಚುರಿಸ್ಟಾರ್ ಶಿವರಾಜಕುಮಾರ್ ನಟನೆಯ ಘೋಸ್ಟ್ ಚಿತ್ರ ಸಿಕ್ಕಾಪಟ್ಟೆ ಕ್ರೇಜ್ ಕ್ರಿಯೇಟ್ ಮಾಡಿತ್ತು. ಶಿವಣ್ಣನ ಹೊಸ ಲುಕ್ ನೋಡಲು ಕಾಯುತ್ತಿದ್ದ ಅಭಿಮಾನಿಗಳಿಗೆ ಗುರುವಾರ ಫುಲ್ ಮಿಲ್ಸ್ ಸಿಕ್ಕಿದೆ. ಘೋಸ್ಟ್ ನೋಡಿದ ಪ್ರತಿಯೊಬ್ಬರು ಬೋಲ್ಡ್ ಆಗಿದ್ದಾರೆ.

ಶ್ರೀನಿ ನಿರ್ದೇಶನದ ಘೋಸ್ಟ್ ಚಿತ್ರದ 48 ಗಂಟೆಗಳಲ್ಲಿ ನಡೆಯುವ ಕಥೆಯಾಗಿದೆ. ಅರ್ಧ ಚಿತ್ರ ಜೈಲಿನಲ್ಲಿಯೇ ನಡೆಯುವುದರಿಂದ ಡಾ.ವಿಷ್ಣುವರ್ಧನ್ ನಟನೆಯ ನಿಷ್ಕರ್ಷ ಚಿತ್ರ ನೆನಪಾಗುತ್ತೆ. ಇಂದಿನ ಪೀಳಿಗೆಗೆ ತಕ್ಕಂತೆ ನಿರ್ದೇಶಕ ಶ್ರೀನಿ, ಶಿವಣ್ಣನನ್ನ ಹೊಸ ಗೆಟಪ್ ನಲ್ಲಿ ತೋರಿಸಿದ್ದು, ಅವರ ಸಿನಿ ಜರ್ನಿಯಲ್ಲಿ ಇದೊಂದು ವಿಭಿನ್ನ ಸಿನಿಮಾ.

ಮಾಸ್ ಪ್ರಿಯರಿಗೆ ಹೇಳಿ ಮಾಡಿಸಿದ ಘೋಸ್ಟ್ ಚಿತ್ರದ ಡೈಲಾಗ್, ಫೈಟ್, ಮ್ಯೂಸಿಕ್, ಸಿನಿಮಾಟೋಗ್ರಫಿ, ಬಿಜಿಎಂ ಸೇರಿ ಪ್ರತಿಯೊಂದು ಕಿಕ್ ಕೊಡುತ್ತೆ. ಯಂಗ್ ಲುಕ್ ನಲ್ಲಿ ನೋಡಿದ ಸಿನಿ ರಸಿಕರು ರಥಸಪ್ತಮಿ, ಆನಂದ ಚಿತ್ರದಲ್ಲಿನ ಶಿವಣ್ಣನನ್ನ ನೋಡಿದಂತಾಗುತ್ತೆ. ಜೈಲ್ ವೊಂದನ್ನು ಯಾಕೆ ಹೈಜಾಕ್ ಮಾಡಲಾಗುತ್ತೆ ಅನ್ನೋದು ಗೊತ್ತಾಗಬೇಕು ಅಂದರೆ ಸಿನಿಮಾ ನೋಡಬೇಕು. ತಮಿಳುನಟ ಜಯರಾಂ, ಹಿಂದಿ ನಟ ಅನುಪಮ್ ಖೇರ್, ನಟಿ ಅರ್ಚನಾ ಜೋಯಿಷ ಸೇರಿ ಅನೇಕರ ತಾರಾಬಳಗವಿದೆ.




Leave a Reply

Your email address will not be published. Required fields are marked *

error: Content is protected !!