ಪ್ರತಿದಿನ ಸಂಜೆ ವಿಶೇಷ ಕಾರ್ಯಕ್ರಮ

100

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಶ್ರೀ ಶಾಂತವೀರ ಪಟ್ಟಾಧ್ಯಕ್ಷರ 44ನೇ ಪುಣ್ಯಸ್ಮರಣೋತ್ಸವ ಹಾಗೂ ಗದುಗಿನ ತೋಂಟದಾರ್ಯ ಮಠದ ಲಿಂ. ಶ್ರೀ ಜಗದ್ಗುರು ಡಾ.ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳ 6ನೇ ಗುರು ಸ್ಮರಣೆ ಕಾರ್ಯಕ್ರಮವು ಮಾ.13 ರಿಂದ ಮಾ.19ರವರೆಗೆ ಪ್ರತಿ ದಿನ ಸಾಯಂಕಾಲ 7 ಗಂಟೆಗೆ ಸಿಂದಗಿಯ ಊರಿನ ಹಿರಿಯಮಠದಲ್ಲಿ ಜರುಗಲಿದೆ ಎಂದು ಶ್ರೀಮಠದ ಪೀಠಾಧ್ಯಕ್ಷರಾದ ಪೂಜ್ಯ ಶ್ರೀ ಶಿವಾನಂದ ಶಿವಾಚಾರ್ಯರು ತಿಳಿಸಿದ್ದಾರೆ.

ಮಾ.13ರಂದು ಕನ್ನೋಳ್ಳಿಯ ಹಿರೇಮಠದ ಶತಾಯುಷಿ ಲಿಂ ಪೂಜ್ಯ ಶ್ರೀ ಮರುಳಾರಾಧ್ಯ ಶಿವಾಚಾರ್ಯರ ವೇದಿಕೆಯಲ್ಲಿ ಸಂಜೆ 7ಗಂಟೆಗೆ ಸ್ಮರಣೋತ್ಸವ ಕಾರ್ಯಕ್ರಮ ಪ್ರಾರಂಭವಾಗಲಿದ್ದು ಕನ್ನೋಳ್ಳಿಯ ಹಿರೇಮಠದ ಶ್ರೀ ಸಿದ್ದಲಿಂಗ ಶೀವಾಚಾರ್ಯರು ಸಾನಿಧ್ಯ ವಹಿಸಲಿದ್ದಾರೆ. ಸ್ಥಳಿಯ ಭೀಮಾಶಂಕರ ಮಠದ ಶ್ರೀ ಸದ್ಗುರು ದತ್ತಯೋಗೀಶ ಸ್ವಾಮಿಗಳು ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ. ಸಿಂದಗಿಯ ಶ್ರೀ ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕ ದಾನಯ್ಯ ಮಠಪತಿ  ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಮಾ.14ರಂದು ಆಲಮೇಲದ ಸಂಸ್ಥಾನ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯರು ಸಾನಿಧ್ಯದಲ್ಲಿ ಮಹಿಳಾ ವಿಚಾರ ಗೋಷ್ಠಿ ನಡೆಯಲಿದ್ದು ಸಮಾಜೋದ್ದಾರದಲ್ಲಿ ಶಿವಶರಣಿಯರು ಎಂಬ ವಿಷಯದ ಕುರಿತು ತಾಳಿಕೋಟಿಯ ಕದಳಿ ವೇದಿಕೆ ಅಧ್ಯಕ್ಷೆ ಉಮಾ ಘಿವಾರಿ ಮತ್ತು ಜಾನಪದ ಸಾಹಿತ್ಯಕ್ಕೆ ಮಹಿಳೆಯರ ಕೊಡುಗೆ ಕುರಿತಾಗಿ ತಾಳಿಕೋಟಿಯ ಶಿವಲೀಲಾ ಮುರಾಳ ಮಾತನಾಡಲಿದ್ದಾರೆ.

ಮಾ.15ಕ್ಕೆ ಯಂಕಂಚಿ ಕುಂಟೋಜಿ ಹಿರೇಮಠದ ಶ್ರೀ ಅಭಿನವ ರುದ್ರಮನಿ ಶಿವಾಚಾರ್ಯರ ಸಾನಿಧ್ಯದಲ್ಲಿ ಲಿಂ ಶಾಂತವೀರ ಪಟ್ಟಾಧ್ಯಕ್ಷರ ಕುರಿತಾದ ಯುವ ಬರಹಗಾರ ರೇಣುಕಾಚಾರ್ಯ ಹಿರೇಮಠ ಅವರ ಸಾಹಿತ್ಯದಲ್ಲಿ ಮೂಡಿ ಬಂದ ಸಿಂದಗಿಯ ಶ್ರೀರಕ್ಷೆ ಭಕ್ತಿ ಗೀತೆಯ ಲೋಕಾರ್ಪಣೆಗೊಳ್ಳಲಿದೆ. ಅಂತರಾಷ್ಟ್ರೀಯ ಹಿಂದೂಸ್ತಾನಿ ಗಾಯಕ ಪಂ.ಶರಣ್ ಚೌಧರಿ ಮತ್ತು ಖ್ಯಾತ ತಬಲಾವಾದಕ ಪಂ.ರಾಘವೇಂದ್ರ ಜೋಶಿ ಅವರಿಂದ ವಚನ ಗಾಯನ ನಡೆಯಲಿದೆ. ಸಿಂದಗಿಯ ರಾಗರಂಜನಿ ಸಂಗೀತ ಅಕಾಡಮಿಯ ಡಾ. ಪ್ರಕಾಶ ತಂಡದವರಿಂದ ಸಂಗೀತ ಸಂಜೆ ಕಾರ್ಯಕ್ರಮ ಜರುಗಲಿದೆ.    

ಮಾ.16 ರಂದು ಕೊಣ್ಣೂರಿನ ಹೊರಗಿನ ಕಲ್ಯಾಣ ಮಠದ ಡಾ. ವಿಶ್ವಪ್ರಭುದೇವ ಶಿವಾಚಾರ್ಯರ ಸಾನಿಧ್ಯದಲ್ಲಿ ಸಂಸ್ಕೃತಿ-ಸAಸ್ಕಾರ ಕಾರ್ಯಕ್ರಮ ಜರುಗಲಿದೆ. ಅಂದು ಮೊಮ್ಮಕ್ಕಳಿಂದ ಅಜ್ಜ-ಅಜ್ಜಿಯರ ಪಾದಪೂಜೆ ನಡೆಯಲಿದೆ. ಬಸವನಬಾಗೇವಾಡಿಯ ಅಕ್ಕಮಹಾದೇವಿ ಬಾಲಕಿಯರ ಪ್ರೌಢ ಶಾಲೆಯ ಶಿಕ್ಷಕ ಅಶೋಕ ಹಂಚಲಿ ಸಂಸ್ಕೃತಿ-ಸಂಸ್ಕಾರ ವಿಷಯದ ಕುರಿತು ಮಾತನಾಡಲಿದ್ದಾರೆ. ಯುವ ಸಾಹಿತಿ ಅಶೋಕ ಬಿರಾದಾರ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಮಾ.17 ರಂದು ಮುಂಜಾನೆ 10ಗಂಟೆಯಿಂದ ಸಂಜೆ 4ರವರೆಗೆ ಸ್ಥಳೀಯ ಮನಗೂಳಿ ಆಸ್ಪತ್ರೆ ಮತ್ತು ವಿಜಯಪುರದ ತಜ್ಞ ವೈದ್ಯರ ಸಹಯೋಗದಲ್ಲಿ ಉಚಿತ ವೈದ್ಯಕೀಯ ತಪಾಷಣೆ ಶಿಬಿರವು ಮನಗೂಳಿ ಆಸ್ಪತ್ರೆಯ ವೈದ್ಯ ಡಾ.ಶಾಂತವೀರ ಮನಗೂಳಿ ಅವರ ನೇತೃತ್ವದಲ್ಲಿ ನಡೆಯಲಿದೆ.

ಅಂದು ಸಂಜೆ 7ಗಂಟೆಗೆ ಅಫಜಲಪೂರದ ಸಂಸ್ಥಾನ ಹಿರೇಮಠದ ಪೂಜ್ಯ ಶ್ರೀ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರ ಸಾನಿಧ್ಯದಲ್ಲಿ ಶಾಂತ ಸಿರಿ ಪ್ರಶಸ್ತಿಯನ್ನು ಸುಮಾರು 600ಕ್ಕೂ ಹೆಚ್ಚು ಹೆರಿಗೆ ಮಾಡಿಸಿದ ಸೂಲಗಿತ್ತಿ ಯರಗಲ್ಲ ಬಿಕೆ ಗ್ರಾಮದ ಲಕ್ಷ್ಮಿಬಾಯಿ ಪಂಚಯ್ಯ ಹಿರೇಮಠ ಅವರಿಗೆ ಪ್ರಶಸ್ತಿ ಪ್ರದಾನವಾಗಲಿದೆ. ಹಿರಿಯ ಜಾನಪದ ಸಾಹಿತಿ ಡಾ.ಎಂ.ಎಂ.ಪಡಶೆಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. ಯೋಗ ಮತ್ತು ಆರೋಗ್ಯ ವಿಷಯದ ಕುರಿತಾಗಿ ನಿವೃತ್ತ ಶಿಕ್ಷಕ ಡಾ.ಜಿ.ಎಸ್.ಭೂಸಗೊಂಡ ಅವರು ಮಾತನಾಡಲಿದ್ದಾರೆ.

ಮಾ.18 ರಂದು ಸಂಜೆ 7 ಗಂಟೆಗೆ ನೆಲೋಗಿಯ ಶ್ರೀ ಶಿವಾನಂದೇಶ್ವರ ವಿರಕ್ತಮಠದ ಪೂಜ್ಯ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳ ಸಾನಿಧ್ಯದಲ್ಲಿ  ಗದುಗಿನ ಲಿಂ ಪೂಜ್ಯ ಶ್ರೀ ಜಗದ್ಗುರು ಡಾ.ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳ  ಗುರುಸ್ಮರಣೆ ನಡೆಯಲಿದೆ. ಹಿರಿಯ ಸಾಹಿತಿ ಡಾ.ಚನ್ನಪ್ಪ ಕಟ್ಟಿ ಅವರು ಲಿಂ ಶ್ರೀಗಳ ಕುರಿತಾಗಿ ಮಾತನಾಡಲಿದ್ದಾರೆ. ಈ ಸಂಧರ್ಭದಲ್ಲಿ ಶಾಸಕ ಅಶೋಕ ಮನಗೂಳಿ ಅವರಿಗೆ ಹಾಗೂ ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ, ಸಿಡಿಪಿಓ ಶಂಭುಲಿಂಗ ಹಿರೇಮಠ, ಗದುಗಿನ ತೊಂಟದಾರ್ಯ ಮಠದ ಡಾ.ತೇಜು ಚನ್ನಯ್ಯ ಹಿರೇಮಠ ಅವರಿಗೆ ಸನ್ಮಾನ ನಡೆಯಲಿದೆ. ಅಂದು ರಾತ್ರಿ 10 ಗಂಟೆಗೆ ರಾತ್ರಿ ಜಾಗರಣೆ ಕಾರ್ಯಕ್ರಮ ಜರುಗಲಿದೆ.

ಮಾ.19 ರಂದು ಬೆಳಗ್ಗೆ 8ಗಂಟೆಗೆ ಲಿಂ ಶಾಂತವೀರ ಪಟ್ಟಾಧ್ಯಕ್ಷರ ಬೆಳ್ಳಿ ಮೂರ್ತಿಯ ಮೆರವಣಿಗೆ ನಡೆಯಲಿದ್ದು. ಮಧ್ಯಾಹ್ನ 12 ಗಂಟೆಯಿಂದ ಮಹಾಪ್ರಸಾದ ಮತ್ತು ಸಂಜೆ 7 ಗಂಟೆಗೆ ಸ್ಥಳಿಯ ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರ ಸಾನಿಧ್ಯದಲ್ಲಿ ಮಂಗಲೋತ್ಸವ ಜರುಗಲಿದ್ದು ಕಲಬುರ್ಗಿಯ ರೋಜಾ ಹಿರೇಮಠದ ಶ್ರೀ ಕೆಂಚಬಸವ ಶಿವಾಚಾರ್ಯರು, ರಟಗಲ್ಲದ ಶ್ರೀ ರೇವಣಸಿದ್ದ ಶಿವಾಚಾರ್ಯರು, ಸಂಶಿ ವಿರಕ್ತಮಠದ ಶ್ರೀ ಚನ್ನಬಸವ ದೇವರು, ಗದುಗಿನ ಕುಮಾರೇಶ್ವರ ಧಾರ್ಮಿಕ ಪಾಠ ಶಾಲೆಯ ಚನ್ನಬಸವ ದೇವರು ಸಿಂದಗಿಯ ಶ್ರೀ ಲಿಂಗದೇವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಶ್ರೀಮಠವು ಪ್ರಕಟಣೆಯಲ್ಲಿ ತಿಳಿಸಿದೆ.




Leave a Reply

Your email address will not be published. Required fields are marked *

error: Content is protected !!