ಸಿಲಿಕಾನ್ ಸಿಟಿಯಲ್ಲಿ ವಿರಾಟ್ ಕ್ರೇಜ್

346

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಬೆಂಗಳೂರು: ಏಷ್ಯ ಕಪ್, ವಿಶ್ವಕಪ್ ಗೆ ಟೀಂ ಇಂಡಿಯಾ ಸಿದ್ಧತೆ ನಡೆಸಿದೆ. ಹೀಗಾಗಿ ಆಟಗಾರರಿಗೆ ಫಿಟ್ನೆಸ್ ಟೆಸ್ಟ್ ಮಾಡಲಾಗುತ್ತಿದೆ. ಇದರಿಂದಾಗಿ ಆಟಗಾರರು ಸಿಲಿಕಾನ್ ಸಿಟಿಯಲ್ಲಿ ಉಳಿದುಕೊಂಡಿದ್ದಾರೆ. ಅಟ್ರಿಯಾ ಇನ್ಸ್ ಟ್ಯೂಟ್ ಆಫ್ ಟೆಕ್ನಾಲಜಿ ಯಲ್ಲಿ ಕೊಹ್ಲಿ ಎಂಟ್ರಿ ಕೊಟ್ಟಿದ್ದಾರೆ.

ಶುಕ್ರವಾರ ಇಂಡಿಯನ್ ಕ್ರಿಕೆಟ್ ಟೀಂನ ಸ್ಟಾರ್ ಹಾಗೂ ಅಸಂಖ್ಯಾತ ಅಭಿಮಾನಿಗಳ ಕಿಂಗ್ ಕೊಹ್ಲಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ಆರ್ ಸಿಬಿಯ ಘೋಷಣೆ ಕೇಳಿ ಬಂದಿದೆ. ಯೋ-ಯೋ ಟೆಸ್ಟ್ ನಲ್ಲಿ ಕೊಹ್ಲಿ 17.2 ಸ್ಕೋರ್ ಗಳಿಸಿದ್ದಾರೆ. ಆಟಗಾರರು 16.5 ಸ್ಕೋರ್ ಗಳಿಸಬೇಕು. ಕೊಹ್ಲಿ ಅದನ್ನು ದಾಟಿದ್ದಾರೆ.

ಕೊಹ್ಲಿಯನ್ನು ನೋಡಿದ್ದೇ ತಡ ಅಭಿಮಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿತು. ಭದ್ರತಾ ಪಡೆ ಅವರನ್ನು ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು. ಆಗಸ್ಟ್ 30ರಂದು ಏಷ್ಯ ಕಪ್ ಗೆ ಚಾಲನೆ ಸಿಗಲಿದೆ. ಸೆಪ್ಟೆಂಬರ್ 2ರಂದು ಶ್ರೀಲಂಕಾದ ಕ್ಯಾಂಡಿಯಲ್ಲಿ ಸಂಪ್ರದಾಯಕ ಎದುರಾಳಿ ಪಾಕ್ ವಿರುದ್ಧ ಇಂಡಿಯಾ ಕಣಕ್ಕೆ ಇಳಿಯಲಿದೆ.




Leave a Reply

Your email address will not be published. Required fields are marked *

error: Content is protected !!