‘ಅವತಾರ ಪುರುಷ’ ಎಂಟ್ರಿ

180

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ನಟ ಶರಣ್ ಚಿತ್ರಗಳು ಅಂದರೆ ಅಲ್ಲಿ ನಗುವುದಕ್ಕೆ ಬರ ಇರುವುದಿಲ್ಲ. ಇನ್ನು ಸಿಂಪಿಲ್ ಸುನಿ ನಿರ್ದೇಶನ ಇದ್ದರೆ ಒಂದಿಷ್ಟು ಸಸ್ಪೆನ್ಸ್ ಇರಲೇಬೇಕು. ಈ ಜೋಡಿ ಕೂಡಿಕೊಂಡು ಅವತಾರ ಪುರುಷ ಅನ್ನೋ ಸಿನಿಮಾ ಮಾಡಿದ್ದು, ಅದು ಇಂದು ರಿಲೀಸ್ ಆಗಿದೆ.

ಯೆಸ್, ನಟ ಶರಣ್ ಹಾಗೂ ನಟಿ ಆಶಿಕಾ ರಂಗನಾಥ್ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ನಟ ಶ್ರೀನಗರ ಕಿಟ್ಟಿ ತುಂಬಾ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಿರಿಯ ನಟ ಸಾಯಿಕುಮಾರ್, ಅಶುತೋಷ್ ರಾಣಾ, ಹಿರಿಯ ನಟಿ ಸುಧಾರಾಣಿ ಸೇರಿದಂತೆ ಬಹುದೊಡ್ಡ ತಾರಾ ಬಳಗವಿದೆ.

ಈಗಾಗ್ಲೇ ಟ್ರೇಲರ್ ಸಾಕಷ್ಟು ಕುತೂಹಲ ಮೂಡಿಸಿದೆ. ನಟ ಶರಣ್ ಜ್ಯೂನಿಯರ್ ಆರ್ಟಿಸ್ಟ್ ಪಾತ್ರವನ್ನು ಈ ಚಿತ್ರದೊಳಗೆ ಮಾಡಿದ್ದಾರೆ. ಶರಣ್ ಅಭಿಮಾನಿಗಳು ಸೇರಿದಂತೆ ಕಾಮಿಡಿ, ಸಸ್ಪೆನ್ಸ್ ಇಷ್ಟಪಡುವವರಿಗೆ ಅವತಾರ ಪುರುಷ ಇಷ್ಟವಾಗಲಿದೆ.




Leave a Reply

Your email address will not be published. Required fields are marked *

error: Content is protected !!