‘ಅಧ್ಯಕ್ಷ’ನ ಹುಟ್ಟುಹಬ್ಬಕ್ಕೆ ವಿಶೇಷ ಗಿಫ್ಟ್

325

ಚಂದನವನದ ಅಂಗಳದಲ್ಲಿ ನಟ ಶರಣ ಬೆಳೆದ ರೀತಿ ಸೂಪರ್. ಆರ್ಕೆಸ್ಟ್ರಾದಲ್ಲಿ ಕೆಲಸ ಮಾಡ್ತಾ, ಸಹಕಲಾವಿದನಾಗಿ, ಕಾಮಿಡಿ ಆಕ್ಟರ್ ಆಗಿ ನಂತರ ಸ್ಟಾರ್ ಹೀರೋ ಆದವರು ಅಂದ್ರೆ ನಟ ಶರಣ. ಇಂಥಾ ನಟನಿಗೆ ಇಂದು 48ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ. ಹೀಗಾಗಿ ತಮ್ಮ ನೆಚ್ಚಿನ ನಟನಿಗೆ ಅಭಿಮಾನಿಗಳು ಶುಭಾಶಯಗಳ ಸುರಿಮಳೆ ಸುರಿಸಿದ್ದಾರೆ.

ಶರಣ ಹುಟ್ಟು ಹಬ್ಬದ ನಿಮಿತ್ತ ಸಿಂಪಲ್ ಸುನಿ ನಿರ್ದೇಶನದ ಅವತಾರ ಪುರುಷ ಚಿತ್ರದ ಟೀಸರ್ ಗಿಫ್ಟ್ ನೀಡಲಾಗಿದೆ. ಈ ಮೂಲಕ ಶರಣ ಫ್ಯಾನ್ಸ್ ಗೆ ಖುಷಿ ನೀಡಲಾಗಿದೆ. ಮಲ್ಲಿಕಾರ್ಜುನ ಪುಷ್ಕರ್ ನಿರ್ಮಾಣ ಮಾಡ್ತಿರುವ ಚಿತ್ರದಲ್ಲಿ ಶರಣಗೆ ನಟಿ ಆಶಿಕಾ ರಂಗನಾಥ ಮತ್ತೊಮ್ಮೆ ಜೋಡಿಯಾಗಿದ್ದಾರೆ. ಚುಟು ಚುಟು ಹಾಡಿನ ಜೋಡಿ ಪ್ರೇಕ್ಷರನ್ನ ಮತ್ತೆ ಮೋಡಿ ಮಾಡಲು ಬರ್ತಿದೆ.

ರ್ಯಾಂಬೋ, ವಿಕ್ಟರಿ, ಅಧ್ಯಕ್ಷ, ಜಯಲಲಿತಾ, ಜೈ ಮಾರುತಿ 800, ರಾಜ ವಿಷ್ಣು, ಬುಲೆಟ್ ಬಸ್ಯಾ ಸೇರಿದಂತೆ ಅನೇಕ ಸೂಪರ್ ಹಿಟ್ ಚಿತ್ರಗಳನ್ನ ನೀಡಿದ್ದಾರೆ. ಅನೇಕ ಸಿನಿಮಾಗಳಿಗೆ ಪ್ಲೇ ಬ್ಯಾಕ್ ಸಿಂಗರ್ ಆಗಿಯೂ ಮಿಂಚಿದ್ದಾರೆ. ಇಂಥಾ ನಟನಿಗೆ ಪ್ರಜಾಸ್ತ್ರ ಕಡೆಯಿಂದ ಹುಟ್ಟು ಹಬ್ಬದ ಶುಭಾಶಯಗಳು.




Leave a Reply

Your email address will not be published. Required fields are marked *

error: Content is protected !!