ಪ್ರಜಾಸ್ತ್ರ ಸಿನಿಮಾ ಡೆಸ್ಕ್
ನಟ ಡಾಲಿ ಧನಂಜಯ ಹಾಗೂ ಅಮೃತಾ ಅಯ್ಯಂಗಾರ ಜೋಡಿಯ ಬಡವ ರಾಸ್ಕಲ್ ಚಿತ್ರದ ಉಡುಪಿ ಹೋಟೆಲ್ ಸಾಂಗ್ ರಿಲೀಸ್ ಆಗಿದೆ. ಆನಂದ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಸೋಮವಾರ ಸಂಜೆ 5.55ಕ್ಕೆ ಸಾಂಗ್ ರಿಲೀಸ್ ಮಾಡಲಾಗಿದೆ.
ಈ ಹಾಡಿಗೆ ಡಾಲಿ ಧನಂಜಯ ಸ್ವತಃ ಸಾಹಿತ್ಯ ಬರೆದಿದ್ದಾರೆ. ವಾಸುಕಿ ವೈಭವ ಮ್ಯೂಸಿಕ್ ಕಂಪೋಸ್ ಮಾಡಿದ್ದು, ವಿಜಯ ಪ್ರಕಾಶ ಹಾಡಿದ್ದಾರೆ. ಗಿಣಿಯೇ ನನ್ನ ಗಿಣಿಯೆ.. ಉಡುಪಿ ಹೋಟೆಲು ಮೂಲೆ ಟೇಬಲು.. ಮೇಲೆ ಕಾಫಿ ಲೋಟ ಅನ್ನೋ ಸಾಲುಗಳಿಂದ ಹಾಡು ಶುರುವಾಗುತ್ತೆ. ಈ ಚಿತ್ರವನ್ನ ಶಂಕರ ಗುರು ನಿರ್ದೇಶನ ಮಾಡಿದ್ದಾರೆ.