ಆರಂಭದಲ್ಲೇ ಹೊಸ ಶಿಕ್ಷಣ ಸಚಿವರ ಯಡವಟ್ಟು: 6 ಗಂಟೆಯಾದರೂ ವೆಬ್ ಸೈಟ್ ಓಪನ್ ಆಗುತ್ತಿಲ್ಲ!

345

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಇಂದು ಮಧ್ಯಾಹ್ನ 3.30ಕ್ಕೆ ಕರ್ನಾಟಕ ಸೆಕೆಂಡರಿ ಎಜೂಕ್ಷೇನ್ ಎಕ್ಸಾಂಮಿನೇಷನ್ ಬೋರ್ಡ್ ವೆಬ್ ಸೈಟ್ ನಲ್ಲಿ ಎಸ್ಎಸ್ಎಲ್ ಸಿ ಫಲಿತಾಂಶ ಬರುತ್ತೆ ಎಂದ್ದು, ನೂತನ ಶಿಕ್ಷಣ ಸಚಿವ ಬಿ.ಸಿ ನಾಗೇಶ ಹೇಳಿದ್ದಾರೆ. ಆದ್ರೆ, ಸಂಜೆ 6 ಗಂಟೆಯಾದರೂ ವೆಬ್ ಸೈಟ್ ಓಪನ್ ಆಗುತ್ತಿಲ್ಲ.

ಸುದ್ದಿಗೋಷ್ಠಿ ಮಾಡಿದ ಸಚಿವರು, ಶೇಕಡ 99.9ರಷ್ಟು ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. 169 ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆದಿದ್ದಾರೆ ಎಂದೆಲ್ಲ ಮಾಹಿತಿ ನೀಡಿದ್ದಾರೆ. ಆದ್ರೆ, ವಿದ್ಯಾರ್ಥಿಗಳು ಫಲಿತಾಂಶ ನೋಡಲು http://kseeb.kar.nic.in ಗೆ ಹೋದರೆ ದಿಸ್ ಸೈಟ್ ಕೇನಾಟ್ ಬಿ ರೀಚ್ಡ್ ಎಂದು ಬರುತ್ತಿದೆ. ಈ ಮೂಲಕ ನೂತನ ಶಿಕ್ಷಣ ಸಚಿವರು ಆರಂಭದಲ್ಲೇ ಯಡವಟ್ಟು ಮಾಡಿಕೊಂಡಿದ್ದಾರೆ ಎಂದು ವಿದ್ಯಾರ್ಥಿಗಳು, ಪೋಷಕರು ಕಿಡಿ ಕಾರುತ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!