ಲವ್ ಯೂ ರಚ್ಚು ಶೂಟಿಂಗ್ ವೇಳೆ ಅನಾಹುತ: ಫೈಟರ್ ಸಾವು

341

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ರಾಮನಗರ: ಲವ್ ಯೂ ರಚ್ಚು ಚಿತ್ರದ ಶೂಟಿಂಗ್ ವೇಳೆ ದುರಂತವೊಂದು ಸಂಭವಿಸಿದ್ದು, ಫೈಟರ್ ವೊಬ್ಬರು ಸಾವನ್ನಪ್ಪಿದ್ದಾರೆ. 28 ವರ್ಷದ ಸಹಾಯಕ ಫೈಟರ್ ವಿವೇಕ ಎನ್ನುವರು ವಿದ್ಯುತ್ ತಗುಲಿ ಮೃತಪಟ್ಟಿದ್ದಾರೆ.

ಜೋಗನದೊಡ್ಡಿ ಬಳಿಯಲ್ಲಿ ಈ ಒಂದು ಘಟನೆ ನಡೆದಿದೆ. ಘಟನೆ ಸಂಬಂಧ ನಿರ್ದೇಶಕ ಆರ್.ಶಂಕರ, ಸ್ಟಂಟ್ ಮಾಸ್ಟರ್ ಸೇರಿ ನಾಲ್ವರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನಾ ಸ್ಥಳಕ್ಕೆ ಡಿವೈಎಸ್ಪಿ ಮೋಹನ ಕುಮಾರ, ಪಿಎಸ್ಐ ಪ್ರಕಾಶ ಭೇಟಿ ನೀಡಿದ್ದಾರೆ.

ಇನ್ನು ಈ ಬಗ್ಗೆ ಮಾತ್ನಾಡಿರುವ ಈ ಚಿತ್ರದ ನಟ ಅಜಯ ರಾವ್, ಬೇಜವಾಬ್ದಾರಿಯಿಂದ ದುರಂತ ಸಂಭವಿಸಿದೆ. ಹೈಟೆನ್ಷನ್ ವಿದ್ಯುತ್ ತಂತಿಗೆ ಮೆಟಲ್ ರೋಪ್ ಬಳಸಿ ಶೂಟಿಂಗ್ ಮಾಡಲಾಗಿದೆ. ಈ ಬಗ್ಗೆ ಕಳೆದ 5 ದಿನಗಳ ಹಿಂದೆ ನಾನು ಪ್ರಶ್ನಿಸಿ ಕಟ್ಟವನಾಗಿದ್ದೇನೆ. ಮುಂಜಾಗ್ರತ ಕ್ರಮ ಕೈಗೊಳ್ಳದ ಪರಿಣಾಮ ಅಮಾಯಕ ಸಾವನ್ನಪ್ಪಿದ್ದಾನೆ ಎಂದು ನಟ ಅಜಯ ರಾವ್ ಕಿಡಿ ಕಾರಿದ್ದಾರೆ.

ಲವ್ ಯು ರಚ್ಚು ಚಿತ್ರದಲ್ಲಿ ನಟ ಅಜಯ ರಾವ್ ಗೆ ಜೋಡಿಯಾಗಿ ನಟಿ ರಕ್ಷಿತಾ ರಾಮ್ ಕಾಣಿಸಿಕೊಂಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!