ರಾಮನಗರದಲ್ಲಿ ತಾಯಿ, ಮಗ ಆತ್ಮಹತ್ಯೆ

144

ಪ್ರಜಾಸ್ತ್ರ ಸುದ್ದಿ

ರಾಮನಗರ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತಾಯಿ ಹಾಗೂ ಮಗ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುಮಾರಸ್ವಾಮಿ ಬಡಾವಣೆಯಲ್ಲಿ ನಡೆದಿದೆ. ವಿಜಯಲಕ್ಷ್ಮಿ(50) ಹಾಗೂ ಮಗ ಹರ್ಷ(25) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು.

ಕಳೆದ ರಾತ್ರಿ ಊಟದ ವಿಚಾರಕ್ಕೆ ಜಗಳವಾಗಿದೆಯಂತೆ. ಇದರಿಂದ ಮನನೊಂದು ತಾಯಿ ಸಂಪಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಾಯಿಯ ಸಾವಿನ ಸುದ್ದಿ ತಿಳಿದು ಮಗ ಹರ್ಷ ನೇಣಿಗೆ ಶರಣಾಗಿದ್ದಾನೆ. ಐಜೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.




Leave a Reply

Your email address will not be published. Required fields are marked *

error: Content is protected !!