ವಾಸಿಂಗ್ಟನ್: ಐಸಿಸ್ ಉಗ್ರ ಸಂಘಟನೆಯ ಮುಖ್ಯಸ್ಥ ಅಲ್ ಅಬೂಬಕರ್ ಬಾಗ್ದಾದಿ ಹತ್ಯೆಯ ವಿಡಿಯೋವನ್ನ ಅಮೆರಿಕ ರಿಲೀಸ್ ಮಾಡಿದೆ. ಅಮೆರಿಕ ರಕ್ಷಣಾ ಇಲಾಖೆ ಫೋಟೋ ಹಾಗೂ ವಿಡಿಯೋ ರಿಲೀಸ್ ಮಾಡಿದೆ.
ಉಗ್ರನ ಹತ್ಯೆ ಬಗ್ಗೆಯೂ ಕೆಲವೊಂದಿಷ್ಟು ಅನುಮಾನಗಳು ವ್ಯಕ್ತವಾಗಿದ್ವು. ಹೀಗಾಗಿ ವೈಮಾನಿಕ ದಾಳಿ ನಡೆಸಿದ್ದು, ಸೈನಿಕರು ಗೋಡೆಯನ್ನ ದಾಟಿಕೊಂಡು ಹೋಗ್ತಿರುವುದು ಸೇರಿದಂತೆ, ಬಾಗ್ದಾದಿ ನೆಲೆಸಿದ್ದ ಅಡಗುದಾಣದ ಮೇಲೆ ದಾಳಿ ಮಾಡಿದ ವಿಡಿಯೋ ರಿಲೀಸ್ ಮಾಡಲಾಗಿದೆ.
ಇನ್ನು ಬಾಗ್ದಾದಿ ಆತ್ಮಹತ್ಯೆ ಮಾಡಿಕೊಂಡ ವೇಳೆ ಮೂವರು ಮಕ್ಕಳು ಸಾವನ್ನಪ್ಪಿದ್ರು ಎಂದು ಅಧ್ಯಕ್ಷ ಡೂನಾಲ್ಡ್ ಟ್ರಂಪ್ ಹೇಳಿದ್ರು. ಆದ್ರೆ, ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಕೇಂದ್ರಿಯ ಕಮಾಂಡ್ ನ ಕಮಾಂಡರ್ ಮೆಕೆಂಜಿ ತಿಳಿಸಿದ್ದಾರೆ.