2 ಸಾವಿರ ಆಕ್ಸಿಜನ್ ಮಷಿನ್ ನೀಡಿದ ಬಿಸಿಸಿಐ

266

ಪ್ರಜಾಸ್ತ್ರ ಕ್ರೀಡಾ ಸುದ್ದಿ

ನವದೆಹಲಿ: ಕರೋನಾ 2ನೇ ಅಲೆಯಿಂದ ಭಾರತದ ಸಾಕಷ್ಟು ಸಾವು ನೋವು ಅನುಭವಿಸ್ತಿದೆ. ಹೀಗಾಗಿ ಹಲವಾರು ಜನರು ಹಲವಾರು ರೀತಿಯಲ್ಲಿ ಸಹಾಯ ಮಾಡ್ತಿದ್ದಾರೆ. ಇದೀಗ ಬಿಸಿಸಿಐ ಆಕ್ಸಿಜನ್ ಮಷಿನ್ ನೀಡಿದೆ. 10 ಲೀಟರ್ ಸಾಮಾರ್ಥ್ಯದ 2 ಸಾವಿರ ಮಷಿನ್ ಗಳನ್ನ ನೀಡಿರುವ ಬಗ್ಗೆ ಸೋಮವಾರ ತಿಳಿಸಿದೆ.

ಈ ಮೂಲಕ ಕರೋನಾ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಶಕ್ತಿ ತುಂಬಿಸುವ ಕೆಲಸ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಭಾರತದಾದ್ಯಂತ ಮಡಿಕಲ್ ಕಿಟ್ ಗಳನ್ನ ನೀಡಲಾಗುವುದು ಎಂದು ತಿಳಿಸಿದೆ.

ಈ ಬಗ್ಗೆ ಮಾತ್ನಾಡಿರುವ ಬಿಸಿಸಿಐ ಅಧ್ಯಕ್ಷ ಸೌರವ ಗಂಗೂಲಿ, ಕರೋನಾ ವಿರುದ್ಧದ ಹೋರಾಟದಲ್ಲಿ ಆರೋಗ್ಯ ಇಲಾಖೆ ಹಾಗೂ ವೈದ್ಯರು ಶಕ್ತಿಮೀರಿ ಹೋರಾಟ ನಡೆಸಿದ್ದಾರೆ. ಅವರ ಪರವಾಗಿ ನಾವು ನಿಲ್ಲುತ್ತೇವೆ. ಅವರನ್ನ ರಕ್ಷಿಸಲು ಸಾಧ್ಯವಾದಷ್ಟು ಸಹಾಯ ಮಾಡುತ್ತೇವೆ. ರೋಗಿಗಳ ಚೇತರಿಕೆಗಾಗಿ ಬಿಸಿಸಿಐ ಸದಾ ಸಿದ್ಧವಿದೆ. ಅವರಿಗೆ ತಕ್ಷಣದಿಂದ ಆಕ್ಸಿಜನ್ ಮಷಿನ್ ಸಿಗಲು ಸಹಾಯ ಮಾಡುತ್ತೇವೆ ಎಂದಿದ್ದಾರೆ.




Leave a Reply

Your email address will not be published. Required fields are marked *

error: Content is protected !!