ಕಿಂಗ್ ಕೊಹ್ಲಿ ಕ್ರಿಕೆಟ್ ಬದುಕಿಗೆ 15 ವರ್ಷ

192

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಜಗತ್ತಿನ ತುಂಬಾ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ, ಕ್ರಿಕೆಟ್ ಬದುಕಿಗೆ ಇಂದು 15 ವರ್ಷಗಳು ತುಂಬಿವೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಖುಷಿ ಹಂಚಿಕೊಂಡಿದ್ದಾರೆ. ಎಂದೆಂದಿಗೂ ಚಿರ ಋಣಿ ಎಂದಿದ್ದಾರೆ.

ಆಗಸ್ಟ್ 18, 2008ರಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದರು. ಹಲವು ದಾಖಲೆಗಳ ಸರದಾರ, ರನ್ ಮಷಿನ್ ಎಂದೆಲ್ಲ ಖ್ಯಾತಿ ಗಳಿಸಿರುವ ಕೊಹ್ಲಿ ಫೋಟೋ ಜೊತೆಗೆ ಎಲ್ಲರಿಗೂ ಧನ್ಯವಾದ ಸಲ್ಲಿಸಿದ್ದಾರೆ. ಅವರ ಅಭಿಮಾನಿಗಳು ಅವರಿಗೆ ಶುಭ ಕೋರಿದ್ದಾರೆ.

ಬಿಸಿಸಿಐ ಸಹ ಟ್ವೀಟ್ ಮಾಡಿ ಶುಭ ಕೋರಿದೆ. 110 ಬೌಲ್ ಗಳಲ್ಲಿ 166 ರನ್ ಗಳಿಸಿದ ಫೋಟೋದೊಂದಿಗೆ ಹೊಸ ಮೈಲುಗಲ್ಲು ಸಾಧಿಸಿದಕ್ಕೆ ಅಭಿನಂದನೆ ಸಲ್ಲಿಸಿದೆ. ಹೀಗಾಗಿ ಕ್ರಿಕೆಟ್ ಜಗತ್ತಿನ ದಿಗ್ಗಜರೆಲ್ಲ ಶುಭ ಕೋರಿದ್ದಾರೆ.




Leave a Reply

Your email address will not be published. Required fields are marked *

error: Content is protected !!