23ನೇ ವಯಸ್ಸಿಗೆ ಮೇಯರ್ ಆದ ಬಳ್ಳಾರಿ ಯುವತಿ

221

ಪ್ರಜಾಸ್ತ್ರ ಸುದ್ದಿ

ಬಳ್ಳಾರಿ: ಮಹಾನಗರ ಪಾಲಿಕೆ ನೂತನ ಮೇಯರ್ ಆಗಿ ಕಾಂಗ್ರೆಸ್ ನ ಡಿ.ತ್ರಿವೇಣಿ ಆಯ್ಕೆ ಆಗಿದ್ದು, ಇವರ ವಯಸ್ಸು ಕೇವಲ 23 ವರ್ಷ. ಇಷ್ಟು ಚಿಕ್ಕ ವಯಸ್ಸಿಗೆ ಮಹಾನಗರ ಪಾಲಿಕೆ ಮೇಯರ್ ಆದ ಮೊದಲ ಮೊದಲ ಯುವತಿ ಅನ್ನೋ ದಾಖಲೆ ಬರೆದಿದ್ದಾರೆ. ಕಾಂಗ್ರೆಸ್ ನ ಮತ್ತೊರ್ವ ಸದಸ್ಯೆ ಬಿ.ಜಾನಕಿ ಉಪಾಧ್ಯಕ್ಷೆಯಾಗಿ ಆಯ್ಕೆ ಆಗಿದ್ದಾರೆ.

ಮೇಯರ್ ಚುನಾವಣೆಗೆ ನಡೆದ ಮತದಾನದಲ್ಲಿ 44 ಮತದಾರರಲ್ಲಿ 28 ಮತಗಳು ತ್ರಿವೇಣಿ.ಡಿ ಅವರ ಪರ ಬಂದಿವೆ. 2022ರಲ್ಲಿ ಪಾಲಿಕೆ ಚುನಾವಣೆ ನಡೆದಿದೆ. ಈ ಮೊದಲು 34ನೇ ವಾರ್ಡ್ ನ ಕಾಂಗ್ರೆಸ್ ಸದಸ್ಯೆ ಎಂ.ರಾಜೇಶ್ವರಿ, 37ನೇ ವಾರ್ಡಿನ ಮಾಲನ್ ಬಿ ಉಪ ಮೇಯರ್ ಆಗಿ ಆಯ್ಕೆಯಾಗಿದ್ದರು.

ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ನಡೆದ ಮೇಯರ್ ಹಾಗೂ ಉಪ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ಜಯ ಸಾಧಿಸಿದ್ದು, ಪಕ್ಷದ ಚಟುವಟಿಕೆಗೆ ಮತ್ತಷ್ಟು ಶಕ್ತಿ ತುಂಬಲಿದೆ.




Leave a Reply

Your email address will not be published. Required fields are marked *

error: Content is protected !!