ಬೆಂಗಳೂರು ಬಂದ್ ಮುಂದುವರಿಕೆ ಬಗ್ಗೆ ಸಿಎಂ ಹೇಳಿದ್ದೇನು?

324

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜಧಾನಿಯಲ್ಲಿ ಈಗಾಗ್ಲೇ ಜುಲೈ 22ರ ತನಕ ಲಾಕ್ ಡೌನ್ ಘೋಷಿಸಲಾಗಿದೆ. ಆದ್ರೂ, ಕರೋನಾ ಅಟ್ಟಹಾಸ ನಿಂತಿಲ್ಲ. 18,828 ಜನರಲ್ಲಿ ಇದುವರೆಗೂ ಸೋಂಕು ಕಾಣಿಸಿಕೊಂಡಿದೆ. 497 ಜನರು ಸಾವನ್ನಪ್ಪಿದ್ದಾರೆ. ಹೀಗಾಗಿ ಇನ್ನೂ ಒಂದು ವಾರ ಲಾಕ್ ಡೌನ್ ಮಾಡಬೇಕು ಅನ್ನೋ ಅಭಿಪ್ರಾಯ ವ್ಯಕ್ತವಾಗಿದೆ.

ಆದ್ರೆ, ಇಂದು ನಡೆದ ಸಭೆಯಲ್ಲಿ ಲಾಕ್ ಡೌನ್ ಮುಂದುವರೆಕೆಗೆ ಸಿಎಂ ಮನಸ್ಸು ಮಾಡಿಲ್ಲ. ಹಾಟ್ ಸ್ಪಾಟ್ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಿ. ವಲಯವಾರು ಅನಾಹುತ ನಡೆದ್ರೆ, ಅಲ್ಲಿ ನೇಮಿಸಿರುವ ಅಧಿಕಾರಿಗಳೇ ಹೊಣೆ ಎಂದಿದ್ದಾರೆ.

ಬಿಬಿಎಂಪಿ ಹಾಗೂ ತಜ್ಞರು ಲಾಕ್ ಡೌನ್ ಮುಂದುವರೆಕೆಗೆ ಸಲಹೆ ನೀಡಿದ್ರು. ಈ ಸಂಬಂಧ ನೇಮಿಸಿರುವ 8 ಜನ ಅಧಿಕಾರಿಗಳ ಸಭೆಯಲ್ಲಿ ಚರ್ಚಿಸಿದ ಸಿಎಂ ಬಿ.ಎಸ್ ಯಡಿಯೂರಪ್ಪ, ಲಾಕ್ ಡೌನ್ ಮುಂದುವರಿಕೆಗೆ ಒಲವು ತೋರಿಸಿಲ್ಲ. ಬರೀ ಲಾಕ್ ಡೌನ್ ಮಾಡಿದ್ರೆ ಸಾಲದು, ಆರ್ಥಿಕತೆ ಬಗ್ಗೆಯೂ ವಿಚಾರ ಮಾಡಬೇಕು ಎಂದಿದ್ದಾರೆ.

ಅಗತ್ಯವಿರುಷ್ಟು ಆಂಬ್ಯುಲೆನ್ಸ್ ಖರೀದಿಸಿ, ನಾಳೆ ವಾರ್ಡ್ ವಾರು ಹಂಚಿಕೆ ಮಾಡಲು ಸೂಚಿಸಿದ್ದಾರೆ. 8 ವಲಯಗಳ ಅಧಿಕಾರಿಗಳಿಗೆ, ಖಡಕ್ ವಾರ್ನಿಂಗ್ ಕೊಟ್ಟಿದ್ದು, ನಿಮ್ಮ ವ್ಯಾಪ್ತಿಯಲ್ಲಿ ಕಾಣಿಸಿಕೊಳ್ಳುವ ಸೋಂಕಿತರನ್ನ ಅಲ್ಲಿಯೇ ಚಿಕಿತ್ಸೆ ನೀಡಿ ಎಚ್ಚರಿಕೆ ವಹಿಸಿ ಎಂದಿದ್ದಾರೆ.




Leave a Reply

Your email address will not be published. Required fields are marked *

error: Content is protected !!