ಪುಟಾಣಿಯ ‘ಪ್ರಾಮಾಣಿಕ’ ಅಂಗಡಿಗೆ ಕನ್ನ.. ಮುಂದೇನಾಯ್ತು?

343

ಈ ಫೋಟೋದಲ್ಲಿ ಕಾಣುವ ಬಾಲಕನ ಹೆಸರು ಹ್ಯಾರಿ. ಐದು ವರ್ಷದ ಈ ಬಾಲಕ, ನಿತ್ಯ ಶಾಲೆಗೆ ಹೋಗುವಾಗ, ಮನೆಯಲ್ಲಿ ತಯಾರಾಗುವ ಮುಲಾಮು, ಸಾಬೂನು, ಹಾಲುಗಳನ್ನ ಮಾರಾಟ ಮಾಡ್ತಾನೆ. ಅದು ಹೇಗೆ ಅಂದ್ರೆ, ಪುಟ್ಟದಾದ ಹಾನೆಸ್ಟಿ ಶಾಪ್ ಹೆಸರಿನ ಮೂಲಕ.

ಒಂದು ಟೇಬಲ್ ಮೇಲೆ ಮಾರುವ ವಸ್ತುಗಳನ್ನ ಇಟ್ಟು, ಪಕ್ಕದಲ್ಲಿಯೇ ಹಣ ಹಾಕಲು ಡಬ್ಬಿ ಇಟ್ಟಿರ್ತಾನೆ. ಜನರು ತಮ್ಗೆ ಬೇಕಾದ ವಸ್ತುಗಳನ್ನ ಪಡೆದು ಹಣವನ್ನ ಅದಕ್ಕೆ ಹಾಕಿ ಹೋಗ್ತಾರೆ. ಆದ್ರೆ, ಕಳೆದ ಮಂಗಳವಾರ ಆತನ ಅಂಗಡಿ ಕಳ್ಳತನವಾಗಿತ್ತು.

ಹ್ಯಾರಿ ಬಂದು ನೋಡಿದ್ರೆ ಟೇಬಲ್ ಮತ್ತು ಬೋರ್ಡ್ ಬಿಟ್ಟರೆ ಬೇರೆ ಏನೂ ಇರ್ಲಿಲ್ಲ. ಹೀಗಾಗಿ ಹ್ಯಾರಿ ಕಣ್ಣೀರು ಹಾಕ್ತಿದ್ದ. ಈ ಫಿಲಿಫ್ ಸೆವನ್ ಎಂಬವರು ಟ್ವೀಟರ್ ನಲ್ಲಿ ಬರೆದುಕೊಂಡಿದ್ರು. ನನ್ನ ಸೇಲ್ ರೂಮಿನ ಹತ್ತಿರ ಹ್ಯಾರಿ ಅನ್ನೋ 5 ವರ್ಷದ ಬಾಲಕ ಅಂಗಡಿ ಹಾಕಿದ್ದ. ಯಾರೋ ಅವನ ವಸ್ತುಗಳನ್ನ, ಹಣವನ್ನ ಕದ್ದಿದ್ದಾರೆ. ಅವರಿಗೆ ನಾಚಿಕೆಯಾಗಬೇಕು ಎಂದಿದ್ದ.

https://twitter.com/PhilipSerrell/status/1283003084579495936?s=20

ಟ್ವೀಟ್ ನೋಡಿದ ನೂರಾರು ಜನರು ಹ್ಯಾರಿಗೆ ಸಹಾಯ ಮಾಡಿದ್ದಾರಂತೆ. ಪುಟಾಣಿ ಹ್ಯಾರಿಗೆ ಆತ್ಮವಿಶ್ವಾಸ ತುಂಬುವ ಮೂಲಕ ಸಾಥ್ ನೀಡಿದ್ದಾರೆ. ಪ್ರಮಾಣಿಕ ಅಂಗಡಿಯನ್ನ ಅಪ್ರಮಾಣಿಕ ಕದ್ದಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ.




Leave a Reply

Your email address will not be published. Required fields are marked *

error: Content is protected !!