ಟಿಎಸ್ಆರ್, ಮೊಹರೆ ಹನುಮಂತರಾಯ ಪ್ರಶಸ್ತಿ ಪ್ರಕಟ

866

ಪತ್ರಿಕೋದ್ಯಮದಲ್ಲಿ ಸಾಕಷ್ಟು ಸಾಧನೆ ಮಾಡಿದವರಿಗೆ ನೀಡುವ ರಾಜ್ಯ ಸರ್ಕಾರದ ಟಿಎಸ್ಆರ್ ಹಾಗೂ ಮೊಹರೆ ಹನುಮಂತರಾಯ ಪ್ರಶಸ್ತಿಯನ್ನ ಘೋಷಣೆ ಮಾಡಲಾಗಿದೆ. ಟಿಎಸ್ಆರ್ ಸ್ಮಾರಕ ಪತ್ರಿಕೋದ್ಯಮ ಪ್ರಶಸ್ತಿ ಹಾಗೂ ಮೊಹರೆ ಹನುಮಂತರಾಯ ಪ್ರಶಸ್ತಿಯನ್ನ ಘೋಷಣೆ ಮಾಡಲಾಗಿದೆ.

2017ನೇ ಸಾಲಿನ ಟಿಎಸ್ಆರ್ ಪ್ರಶಸ್ತಿಯನ್ನ ಸಂಯುಕ್ತ ಕರ್ನಾಟಕ ಹಾಗೂ ಕರ್ಮವೀರ ಪತ್ರಿಕೆಯ ನಿವೃತ್ತ ಸಂಪಾದಕ ಧೃವರಾಜ ಮುತಾಲಿಕ ಅವರಿಗೆ, 2018ನೇ ಸಾಲಿನ ಪ್ರಶಸ್ತಿಯನ್ನ ಮೈಸೂರಿನ ಕನ್ನಡಿಗರ ಪ್ರಜಾ ನುಡಿ ಪತ್ರಿಕೆಯ ಸಂಪಾದಕ ಡಿ.ಮಹೇದವಪ್ಪ ಅವರಿಗೆ ನೀಡಲಾಗಿದೆ.

2017ನೇ ಸಾಲಿನ ಮೊಹರೆ ಹನುಮಂತರಾಯ ಪ್ರಶಸ್ತಿಯನ್ನ ತುಮಕೂರು ಪ್ರಾದೇಶಿಕ ಪತ್ರಿಕೆ ಸಂಪಾದಕ ಎಸ್.ನಾಗಣ್ಣ, 2018ನೇ ಸಾಲಿನ ಪ್ರಶಸ್ತಿಯನ್ನ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನ ಸುದ್ದಿ ಬಿಡುಗಡೆ ಪತ್ರಿಕೆಯ ಪ್ರಧಾನ ಪ್ರಸಂಪಾದಕ ಡಾ.ಯು.ಪಿ ಶಿವಾನಂದ ಪ್ರಶಸ್ತಿಗೆ ಭಾಜನಾಗಿದ್ದಾರೆ. ಇನ್ನು 2016ನೇ ಸಾಲಿನ ಟಿಎಸ್ಆರ್ ಪ್ರಶಸ್ತಿಗೆ ವಿಜ್ಞಾನ ಲೇಖಕರಾದ ನಾಗೇಶ ಹೆಗಡೆ ಹಾಗೂ ಮೊಹರೆ ಹನುಮಂತರಾಯ ಪ್ರಶಸ್ತಿಗೆ ಕರಾವಳಿ ಮುಂಜಾವು ದಿನ ಪತ್ರಿಕೆಯ ಸಂಪಾದಕ ಗಂಗಾಧರ ಹಿರೇಗುತ್ತಿ ಆಯ್ಕೆಯಾಗಿದ್ದಾರೆ.

ಕರ್ನಾಟಕ ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಡಿ.ವಿ ಶೈಲೇಂದ್ರ ಕುಮಾರ ಅವರ ಅಧ್ಯಕ್ಷತೆಯಲ್ಲಿ ಸಾಧಕರನ್ನ ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ತಲಾ 2 ಲಕ್ಷ ರೂಪಾಯಿ ಮೌಲ್ಯದ ನಗದು ಹಾಗೂ ಸ್ಮರಣಿಕೆಯನ್ನ ಹೊಂದಿದೆ. ಜನವರಿ ಮೊದಲ ವಾರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಿಎಂ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.




Leave a Reply

Your email address will not be published. Required fields are marked *

error: Content is protected !!