ವಿವಿಧ ಬೇಡಿಕೆಗಳ ಈಡೇರಿಕೆಗೆ ಆಶಾ ಕಾರ್ಯಕರ್ತೆಯರ ಮನವಿ

602

ಪ್ರಜಾಸ್ತ್ರ ಸುದ್ದಿ

ಜಮಖಂಡಿ: ತಮಗೆ ಮಾಸಿಕ 12 ಸಾವಿರ ರೂಪಾಯಿ ಗೌರವಧನ ಖಚಿತ ಪಡಿಸಬೇಕು, ಕೋವಿಡ್-19 ಕೆಲಸಕ್ಕೆ ಅಗತ್ಯವಿರುವಷ್ಟು ಸುರಕ್ಷಣಾ ಸಾಮಾಗ್ರಿಗಳನ್ನ ನೀಡಬೇಕು ಹಾಗೂ ಕೋವಿಡ್-19 ಸೊಂಕಿಗೆ ಒಳಗಾದ ಆಶಾಗೆ ಪರಿಹಾರ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಸಾವಳಗಿ ಗ್ರಾಮದಲ್ಲಿ ಆಶಾ ಕಾರ್ಯಕರ್ತೆಯರು ಮನವಿ ಸಲ್ಲಿಸಿದ್ದಾರೆ.

ಸರ್ಕಾರಕ್ಕೆ ಅಂಚೆ ಪತ್ರ ಬರೆಯುವ ಮೂಲಕ ಮನವಿ ಸಲ್ಲಿಸಿದ್ದಾರೆ. ನಾಲ್ಕೈದು ತಿಂಗಳಿನಿಂದ ನಗರ, ಪಟ್ಟಣ, ಗ್ರಾಮೀಣ ಪ್ರದೇಶವನ್ನದೇ ಕೋವಿಡ್-19 ಸರ್ವೆಯಲ್ಲಿ ತಮ್ಮ ಪ್ರಾಣದ ಹಂಗು, ಕುಟುಂಬದ ಹಿತ ಬದಿಗಿಟ್ಟು ದುಡಿಯುತ್ತಿರುವ ಆಶಾ ಕಾರ್ಯಕರ್ತೆಯರ ಬೇಡಿಕೆಗೆ ಸರ್ಕಾರ ಮೊದಲು ಸ್ಪಂದಿಸಲಿ ಎಂದು ಒತ್ತಾಯಿಸಿದರು.

ಪಿಡಿಓ ಗೀರಿಶ ಕಡಕೋಳ ಅವರ ಮೂಲಕ  ಸರ್ಕಾರಕ್ಕೆ ಮನವಿ ಸಲ್ಲಿಸಿದ್ರು. ಅಲ್ದೇ, ಅಂಚೆ ಪತ್ರ ಬರೆದು ಮುಖ್ಯಮಂತ್ರಿಗಳಿಗೆ ಮನವಿಯನ್ನು ರವಾನಿಸಿದರು. ಈ ವೇಳೆ ಆಶಾ ಕಾರ್ಯಕರ್ತೆಯರಾದ ಅಂಜನಾ ಕುಂಬಾರ, ಶೋಭಾ ಕುಂಬಾರ, ಸವಿತಾ ಕಪಾಲಿ, ಮೀನಾಕ್ಷಿ ಅಥಣಿ, ಗೀತಾ ಕವಾಸೆ, ಪಾರ್ವತಿ ಮೇಲಿನಕೇರಿ, ಸಂದ್ಯಾ ಬೋಸಲೆ, ವಿಜಯಲಕ್ಷೀ ಬಡಿಗೇರ, ಸುರೇಖಾ ಹಿರೇಮಠ, ಗೀತಾ ಬಬಲಾದಿ ಇದ್ದರು.




Leave a Reply

Your email address will not be published. Required fields are marked *

error: Content is protected !!