ಗಾಂಜಾ ಮಾರಾಟ: ಸಾವಳಗಿಯಲ್ಲಿ ಓರ್ವನ ಬಂಧನ

525

ಪ್ರಜಾಸ್ತ್ರ ಅಪರಾಧ ಸುದ್ದಿ

ಜಮಖಂಡಿ: ಸಾವಳಗಿ ಠಾಣಾ ವ್ಯಾಪ್ತಿಯ ಹಿರೇಪಡಸಲಗಿ ಗ್ರಾಮದ ತೋಟದ ಮನೆಯಲ್ಲಿ 60 ಸಾವಿರ ಮೌಲ್ಯದ ಗಾಂಜಾ ಬೆಳೆಯನ್ನ ವಶಕ್ಕೆ ಪಡೆಯಲಾಗಿದೆ. ಗ್ರಾಮದ ಸದಾಶಿವ ಶಿವಪ್ಪ ಕಳ್ಳೋಳಿ ಎಂಬುವರ ತೋಟದಲ್ಲಿ ಬೆಳೆದಿದ್ದ ಗಾಂಜಾ ವಶ ಪಡಿಸಿಕೊಳ್ಳಲಾಗಿದೆ.

ತೋಟದ ಮನೆಯಲ್ಲಿ ವಾಸಿಸುತ್ತಿರುವ ಆರೋಪಿ ಸದಾಶಿವ ಶಿವಪ್ಪ ಕಳ್ಳೋಳಿ, ಸುಮಾರು 60 ಸಾವಿರ ಮೌಲ್ಯದ ಗಾಂಜಾವನ್ನ ಮಾರಾಟ ಮಾಡುವ ಸಲುವಾಗಿ ಇಟ್ಟಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದ್ರು.

ಎಸ್ಪಿ, ಡಿವೈಎಸ್ಪಿ ಹಾಗೂ ಸಿಪಿಐ ಜಮಖಂಡಿ ಇವರ ಮಾರ್ಗದರ್ಶನ ಮೇರೆಗೆ ದಾಳಿ ಮಾಡಿ ಆರೋಪಿಯನ್ನ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಈ ವೇಳೆ ತಹಶೀಲ್ದಾರ್ ಸಂಜೀವ ಇಂಗಳೆ, ಪಿಎಸ್‍ಐ ಎಸ್.ಎಸ್.ಘಾಟಗೆ, ದರೆಪ್ಪ ಕುಂಬಾರ, ಎಮ್,ಸಿ,ಕೂಡಗಿ, ರವಿ ತಳವಾರ ಇದ್ದರು.




Leave a Reply

Your email address will not be published. Required fields are marked *

error: Content is protected !!