ಗಾಂಜಾ, ಎಂಡಿಎಂಎ ಜಪ್ತಿ: ನಾಲ್ವರ ಬಂಧನ

237

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಮಂಡಿಬೆಲೆ ಹತ್ತಿರದ ಸರ್ಕಾರಿ ಅರಣ್ಯ ಪ್ರದೇಶದಲ್ಲಿ ಗಾಂಜಾ ಹಾಗೂ ಮಾದಕ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದು, ನಾಲ್ವರನ್ನು ಬಂಧಿಸಿದ್ದಾರೆ. 50 ಸಾವಿರ ಮೌಲ್ಯದ ಗಾಂಜಾ ಹಾಗೂ 18 ಸಾವಿರ ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಕೆರೆಕೋಡಿ ರಸ್ತೆಯ ಸುಮನ್, ರಾಜೀವ ನಗರದ ಚೇತನ್, ಬೈಯಮ್ಮ ಬಡವಾಣೆಯ ವಿಜಯ್ ಹಾಗೂ ಮಂಡಿಬೆಲೆ ರಸ್ತೆಯ ವಿನೋದ್ ಬಂಧಿತ ಆರೋಪಿಗಳಾಗಿದ್ದಾರೆ. ಇವರ ಬಳಿಯಿದ್ದ 1.87 ಕೆಜಿ ಗಾಂಜಾ, 9 ಗ್ರಾಂ ಎಂಡಿಎಂಎ ಮಾದಕವನ್ನು ವಶಕ್ಕೆ ಪಡೆಯಲಾಗಿದೆ.




Leave a Reply

Your email address will not be published. Required fields are marked *

error: Content is protected !!