ಪ್ರಜಾಸ್ತ್ರ ಸುದ್ದಿ
ಮಧ್ಯಪ್ರದೇಶ: ನಮೀಬಿಯಾದಿಂದ ತೆಗೆದುಕೊಂಡು ಬಂದ 8 ಚೀತಾ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಪ್ರಧಾನಿ ಮೋದಿ ಬಿಡುಗಡೆ ಮಾಡಿದರು. ಪ್ರಧಾನಿ ಮೋದಿ ಜನ್ಮ ದಿನದ ಹಿನ್ನೆಲೆಯಲ್ಲಿ ಚೀತಾಗಳನ್ನು ಭಾರತಕ್ಕೆ ತೆಗೆದುಕೊಂಡು ಬರಲಾಗಿದೆ.
ಸುಮಾರು 70 ವರ್ಷಗಳ ಹಿಂದೆ ಅಳಿದು ಹೋಗಿದ್ದ ಚೀತಾಗಳನ್ನು ಭಾರತಕ್ಕೆ ತರಲಾಗಿದೆ. ನಮೀಬಿಯಾದ ವಿಶೇಷ ವಿಮಾನದ ಮೂಲಕ ಗ್ವಾಲಿಯರ್ ನಲ್ಲಿರುವ ವಾಯುನೆಲೆಗೆ ಇಂದು ಬಂದವು. 8 ಚೀತಾಗಳಲ್ಲಿ 5 ಹೆಣ್ಣು, 3 ಗಂಡು ಇವೆ. ನಮೀಬಿಯಾದೊಂದಿಗೆ ಒಪ್ಪಂದ ಮಾಡಿಕೊಂಡ ಮೇಲೆ ವಿಶೇಷವಾಗಿ ಚೀತಾ ಮುಖದ ಚಿತ್ರದ ವಿನ್ಯಾಸದೊಂದಿಗೆ ರೆಡಿಯಾದ ಬಿ747 ಜಂಬೊ ಜೆಟ್ ಮೂಲಕ ತೆಗೆದುಕೊಂಡು ಬರಲಾಗಿದೆ.
ಯಂತ್ರದ ಸಹಾಯದೊಂದಿಗೆ ಬೋನಿನ ಬಾಗಿಲು ತೆಗೆದ ಪ್ರಧಾನಿ ಮೋದಿ, ಅವುಗಳನ್ನು ಕುನೋ ರಾಷ್ಟ್ರೀಯ ಉದ್ಯಾನಕ್ಕೆ ಬಿಟ್ಟರು. ಮಧ್ಯ ಪ್ರದೇಶದ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಸೇರಿದಂತೆ ಅನೇಕ ಗಣ್ಯರಿದ್ದರು.