ಇವತ್ತಾದ್ರೂ ಮ್ಯಾಚ್ ನಡೆಯುತ್ತಾ?

310

ಮ್ಯಾಂಚಿಸ್ಟರ್: ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ಮಳೆ ಸುರಿದ ಕಾರಣ ಮಂಗಳವಾರದ ಮೊದಲ ಸೆಮಿಫೈನಲ್ ಪಂದ್ಯ ಅರ್ಧಕ್ಕೆ ನಿಂತಿದೆ. ಹೀಗಾಗಿ ಕಾಯ್ದಿರಿಸಿದ ದಿನವಾದ ಇಂದು(ಬುಧವಾರ) ಪಂದ್ಯ ನಡೆಯುವ ಸಾಧ್ಯತೆಯೂ ಕಡಿಮೆಯಿದೆ ಎನ್ನಬಹುದು.

ಈಗಾಗ್ಲೇ ನ್ಯೂಜಿಲೆಂಡ್ 46.1 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 211ರನ್ ಗಳಿಸಿದೆ. ಹೀಗಾಗಿ ಇಂದು ಪಂದ್ಯ ಶುರುವಾದ್ರೆ, ಉಳಿದ ಓವರ್ ಗಳಲ್ಲಿ ಮ್ಯಾಚ್ ಆಡಿಸಿ, ನಂತರ ಭಾರತದ ಬ್ಯಾಟಿಂಗ್ ಶುರುವಾಗುತ್ತೆ. ಒಂದು ವೇಳೆ ಮಳೆ ನಿಂತು ನಿಗಿದಿತ ಸಮಯ ಕಡಿಮೆಯಿದ್ದಾಗ 20 ಓವರ್ ಮ್ಯಾಚ್ ಆಡಿಸಲಾಗುತ್ತೆ. ಅದಕ್ಕೆ ಒಂದಿಷ್ಟು ರನ್ ಗಳ ಟಾರ್ಗೆಟ್ ನೀಡಲಾಗುತ್ತೆ. ಆಗ್ಲೂ ಮಳೆ ಬಂದ್ರೆ ಡಕ್ವರ್ಥ್ ಲೂಯಿಸ್ ನಿಯಮದ ಪ್ರಕಾರ ಯಾವ ಟೀಂ ಫೈನಲ್ ಪ್ರವೇಶಿಸಲಿದೆ ಅನ್ನೋದು ತಿಳಿಸಲಾಗುತ್ತೆ.

ಟೇಲರ್ ಇನ್ನು ಆಡ್ತಿದ್ದಾರೆ

ಲೀಗ್ ಹಂತದಲ್ಲಿಯೂ ಸಹ ಇಂಡಿಯಾ ನ್ಯೂಜಿಲೆಂಡ್ ಪಂದ್ಯ ಮಳೆಯಿಂದ ರದ್ದಾಗಿ ಎರಡು ತಂಡಗಳಿಗೆ ಒಂದೊಂದು ಪಾಯಿಂಟ್ ನೀಡಲಾಗಿತ್ತು. ಒಂದು ವೇಳೆ ಇಂದಿನ ಪಂದ್ಯ ಸಂಪೂರ್ಣವಾಗಿ ನಡೆಯದೇ ಹೋದ್ರೆ, ಇಂಡಿಯಾ ನೇರವಾಗಿ ಫೈನಲ್ ಗೆ ಹೋಗಲಿದೆ. ಪಾಯಿಂಟ್ ಪಟ್ಟಿಯಲ್ಲಿ ಟಾಪ್ ನಲ್ಲಿರುವ ಕಾರಣ, ಭಾರತಕ್ಕೆ ಈ ಅವಕಾಶವಿದೆ. ಹೀಗಾಗಿ ಇಂಡಿಯನ್ ಕ್ರಿಕೆಟ್ ಪ್ರೇಮಿಗಳು ಫೈನಲ್ ನಲ್ಲಿ ಭಾರತ ತಂಡವನ್ನ ನೋಡಲು ಕಾಯುತ್ತಿದ್ದಾರೆ.


TAG


Leave a Reply

Your email address will not be published. Required fields are marked *

error: Content is protected !!