ರವೀಂದ್ರ-ಧೋನಿ ಶತಕದಾಟದ ಕನಸು ಕೈಗೂಡಲಿಲ್ಲ… ಕೋಟ್ಯಾಂತರ ಭಾರತೀಯರ ಕನಸುಗಳಿಗೆ ತಣ್ಣೀರು ಎರಚಿದ ಮಳೆರಾಯ…

465

ಮ್ಯಾಂಚಿಸ್ಟರ್: ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ನಡೆದ ಇಂಡಿಯಾ ನ್ಯೂಜಿಲೆಂಡ್ ಪಂದ್ಯದಲ್ಲಿ ಭಾರತ ಸೋಲುವ ಮೂಲಕ 2019ರ ಚಾಂಪಿಯನ್ಸ್ ಕನಸು ನೂಚ್ಚು ನೂರಾಯ್ತು. ಆರಂಭದಿಂದಲೂ ಮಳೆರಾಯ ಕಾಟ ಕೊಡುತ್ತಲೇ ಇದ್ದ. ಕಡೆಗೂ ಭಾರತದ ಗೆಲುವನ್ನ ಕಸಿದುಕೊಳ್ಳುವಲ್ಲಿ ವರುಣನ ಆಟ ಮೇಲುಗೈ ಸಾಧಿಸಿತು.

ಮಳೆಯಿಂದ ಮಂಗಳವಾರ ನಿಂತಿದ್ದ ಪಂದ್ಯ ಇಂದು ಶುರುವಾಯ್ತು. ಮೊದಲ ಬ್ಯಾಟ್ ಮಾಡಿ 46.1 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 211ರನ್ ಗಳಿಸಿದ್ದ ನ್ಯೂಜಿಲೆಂಡ್ ಇಂದು ಆಟ ಮುಂದುವರೆಸಿ 8 ವಿಕೆಟ್ ನಷ್ಟಕ್ಕೆ 239ರನ್ ಕಲೆ ಹಾಕಿತ್ತು. ಈ ಅಲ್ಪ ಮೊತ್ತ ಬೆನ್ನುಹತ್ತಿದ ಭಾರತದ ಬೆನ್ನುಮೂಳೆ ಮುರಿದಿದ್ದು ಹೆನ್ರಿ ಹಾಗೂ ಬೌಲ್ಟ್. ರೋಹಿತ 1, ಕೆ.ಎಲ್ ರಾಹುಲ 1 ಹಾಗೂ ನಾಯಕ ವಿರಾಟ ಕೊಹ್ಲಿ ಸಹ 1 ರನ್ ಗಳಿಸಿ ಔಟ್ ಆದ್ರು.

ಈ ಪ್ರಮುಖ 3 ವಿಕೆಟ್ ಬಿದ್ದಿದ್ದು ಕೇವಲ 5 ರನ್ ಗಳಿಗೆ. ಮುಂದೆ ದಿನೇಶ ಕಾರ್ತಿಕ ಹಾಗೂ ಪಂಥ ಜೋಡಿ ಸ್ವಲ್ಪ ಹೊತ್ತು ನಿಂತರು. ಆದ್ರೆ, 25 ಬೌಲ್ ಗಳಲ್ಲಿ ಕೇವಲ 6ರನ್ ಗಳಿಸಿದ್ದ ದಿನೇಶ ಕಾರ್ತಿಕ 10ನೇ ಓವರ್ ನಲ್ಲಿ ಔಟ್ ಆದಾಗ ಭಾರತದ ಸ್ಕೋರ್ 24ಕ್ಕೆ 4 ವಿಕೆಟ್. ಆಗ ಆಗ್ಲೇ ಇಂಡಿಯನ್ ಕ್ರಿಕೆಟ್ ಪ್ರೇಮಿಗಳಲ್ಲಿ ಎದೆಬಡಿತ ಜೋರಾಗಿತ್ತು. ಕೋಟಿ ಕೋಟಿ ಹೃದಯಗಳು ದೇವರಲ್ಲಿ ಪಾರ್ಥನೆ ನಡೆಸಿದ್ವು. ಆದ್ರೂ ಅದೃಷ್ಟ ಭಾರತದ ಪರವಿಲ್ಲ ಅನ್ನೋದು ಮತ್ತೆ ಸಾಬೀತಾಗಿದ್ದು 71ರನ್ ಗಳಿಗೆ ಪಂಥ ಅವರ 5ನೇ ವಿಕೆಟ್ ಬಿದ್ದಾಗ್ಲೇ.

ರಿಶಭ ಪಂತ ಹಾಗೂ ಹಾರ್ದಿಕ ಪಾಂಡೆ ಜೋಡಿ ಚೆನ್ನಾಗಿ ಆಡ್ತಿತ್ತು. 32 ರನ್ ಬಾರಿಸಿ ಆಡ್ತಿದ್ದ ಪಂಥ 22.5 ಓವರ್ ನಲ್ಲಿ ಕ್ಯಾಚ್ ಕೊಟ್ಟು ಹೊರ ನಡೆದ್ರು. ಮುಂದೆ 21ರನ್ ಗಳಿಸುವಷ್ಟರಲ್ಲಿ 32ರನ್ ಗಳಿಸಿದ್ದ ಹಾರ್ದಿಕ ಪಾಂಡೆ ಸಹ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದ. ಆಗ ಭಾರತದ ಸ್ಕೋರ್ 92 ರನ್ ಗಳಿಗೆ 6 ವಿಕೆಟ್. ಆದ್ರೆ, ಭಾರತೀಯರ ಎದೆಯಲ್ಲಿ ಮತ್ತೆ ಜೀವ ತುಂಬಿದ್ದು ರವೀಂದ್ರ ಜಡೇಜ ಹಾಗೂ ಎಂ.ಎಸ್ ಧೋನಿ.

ಜಡೇಜ ಹಾಗೂ ಧೋನಿ ಜೋಡಿ ಶತಕದ ಜೊತೆಯಾಟ ಆಡುವ ಮೂಲಕ ಟೀಂ ಇಂಡಿಯನ್ ಅಭಿಮಾನಿಗಳಲ್ಲಿ ಗೆಲುವಿನ ಭರವಸೆ ಮೂಡಿಸಿತು. ಈ ಜೋಡಿ ಖಂಡಿತವಾಗಿ ಮ್ಯಾಚ್ ಗೆಲ್ಲಿಸುತ್ತೆ ಅಂತಾ ಪ್ರತಿಯೊಬ್ಬರು ನಂಬಿಕೊಂಡಿದ್ರು. ಭರ್ಜರಿಯಾಗಿ ಸಿಕ್ಸ್ ಹಾಗೂ ಫೋರ್ ಗಳನ್ನ ಬಾರಿಸ್ತಿದ್ದ ಜಡೇಜ 77ರನ್ ಗಳಿಸಿ ಔಟ್ ಆದಾಗ ಇಡೀ ಕ್ರೀಡಾಂಗಣ ಶಬ್ಧವಾಯ್ತು. ಆಗ ಎಲ್ಲರ ನಿರೀಕ್ಷೆ ಮ್ಯಾಚ್ ಫಿನಿಶರ್ ಧೋನಿ ಮೇಲೆ. ಆಗ ಭಾರತಕ್ಕೆ ಗೆಲ್ಲಲು ಮೂರು ಓವರ್ ಗಳಲ್ಲಿ 31ರನ್ ಬೇಕಿತ್ತು. ಧೋನಿ ಸಿಕ್ಸ್ ಹೊಡೆದಾಗ, ಧೋನಿ ಇರುವಾಗ ನಾವ್ಯಾಕೆ ಹೆದರಬೇಕಂತ ಎಲ್ಲ ಭಾರತೀಯರು ಅಂದುಕೊಂಡಿದ್ರು.

48.3ನೇ ಓವರ್ ನಲ್ಲಿ ಮಾರ್ಟಿಲ್ ಗುಪ್ಟಿಲ್ ನೇರವಾಗಿ ಸ್ಪೆಂಪ್ ಗೆ ಹೊಡೆಯುವ ಮೂಲಕ 2 ರನ್ ಗಳಿಸಲು ನೋಡಿದ ಧೋನಿಯನ್ನ ಔಟ್ ಮಾಡಿ ಭಾರತದಿಂದ ಸಂಪೂರ್ಣವಾಗಿ ಗೆಲುವನ್ನ ಕಸಿದುಕೊಂಡ್ರು. 216ರನ್ ಗಳಿಗೆ 8 ವಿಕೆಟ್ ಕಳೆದುಕೊಂಡ ಭಾರತ ಸೋಲಿನ ಸಮೀಪ ಬಂದು ನಿಂತಿತು. ಮುಂದೆ 5ರನ್ ಬಾರಿಸುವಷ್ಟರಲ್ಲಿ ಚಾಹಲ್ ಹಾಗೂ ಭುವನೇಶ್ವರಕುಮಾರ ಔಟ್ ಆಗುವ ಮೂಲಕ 221ರನ್ ಗಳಿಗೆ ಭಾರತ ಸರ್ವಪತನ ಕಂಡಿತು. ಅಲ್ಲಿಗೆ ಕೋಟ್ಯಾಂತರ ಭಾರತೀಯರ ಕನಸುಗಳು ನುಚ್ಚುನೂರಾಯ್ತು.

ಲೀಗ್ ಹಂತದಲ್ಲಿಯೇ ಮಳೆಯಿಂದಾಗಿ ನ್ಯೂಜಿಲೆಂಡ್ ಪಂದ್ಯ ರದ್ದಾಗಿತ್ತು. ಅದೇ ಮಳೆ ಮತ್ತೆ ಇದೇ ತಂಡಗಳ ನಡುವೆ ಬಂದು ಬಲಿಷ್ಟ ಭಾರತದ ಪಡೆಯಿಂದ ಗೆಲುವು ಕಸಿದುಕೊಂಡಿತು. ಇದ್ರಿಂದಾಗಿ ರನ್ ರೇಟ್ ಮೇಲೆ ಸೆಮಿಫೈನಲ್ ತಲುಪಿದ್ದ ನ್ಯೂಜಿಲೆಂಡ್ ಫೈನಲ್ ಗೆ ಪ್ರವೇಶ ಪಡೆಯಿತು. ಮಳೆಯಿಂದ ಕಂಪ್ಲೀಟ್ ಬದಲಾಗಿದ್ದ ಪಿಚ್ ಬೌಲರ್ ಗಳಿಗೆ ಸಾಥ್ ನೀಡಿತು. ಹೀಗಾಗಿ ಹೆನ್ರಿ, ಬೌಲ್ಟ್, ಸ್ಟನರ್, ಟ್ರಂಟ್ ಹಾಗೂ ಪ್ರಾಗ್ಯೂಸನ್ ಬೌಲ್ ಮುಟ್ಟಲು ಸಾಧ್ಯವಾಗ್ಲಿಲ್ಲ. ಹೀಗಾಗಿಯೇ ಕೇವಲ 5 ರನ್ ಗಳಿಗೆ ರೋಹಿತ, ರಾಹುಲ, ವಿರಾಟ ವಿಕೆಟ್ ಕಳೆದುಕೊಳ್ಳಬೇಕಾಯ್ತು.

ಅಬ್ಬರಿಸಿದ ಜಡೇಜ

ಟೀಂ ಇಂಡಿಯಾಗೆ ಆಪ್ತಬಾಂಧವನಾಗಿ ಕಾಣಿಸಿಕೊಂಡಿದ್ದು ಆಲ್ ರೌಂಡರ್ ರವೀಂದ್ರ ಜಡೇಜ. ನ್ಯೂಜಿಲೆಂಡ್ ಬೌಲರ್ ಗಳ ದಾಳಿಗೆ ತತ್ತರಿಸಿದ್ದ ಟೀಂ ಇಂಡಿಯಾಗೆ ಜೀವ ತುಂಬಿದ್ದು ಜಡೇಜ ಭರ್ಜರಿ ಆಟ. ಔಟ್ ಆಗಿ ಹೋಗಿದ್ದ ಬ್ಯಾಟ್ಸ್ ಮನ್ ಗಳು ಬೌಲ್ ಗಳನ್ನ ವ್ಯರ್ಥಮಾಡಿದ್ರು. ಆದ್ರೆ, 59 ಬೌಲ್ ಗಳಲ್ಲಿ ಭರ್ಜರಿ 4 ಸಿಕ್ಸ್ ಹಾಗೂ 4 ಫೋರ್ ಸಮೇತ 77 ರನ್ ಗಳಿಸಿದ. ನ್ಯೂಜಿಲೆಂಡ್ ಬೌಲರ್ ಗಳನ್ನ ದಂಡಿಸುತ್ತಾ ನಾನು ತಂಡವನ್ನ ಗೆಲುವಿನ ದಡ ಸೇರಿಸುತ್ತೇನೆ ಅನ್ನೋ ಹೋರಾಟ ಮಾಡಿದ. ಆದ್ರೆ, 48ನೇ ಓವರ್ ನ  ಟ್ರಂಟ್ ಓವರ್ ನ ಕೊನೆಯ ಬೌಲ್ ನಲ್ಲಿ ವಿಲಿಯಮ್ಸ್ ಗೆ ಕ್ಯಾಚ್ ಕೊಟ್ಟು ಹೋದಾಗ ಕ್ರೀಡಾಂಗಣದಲ್ಲಿ ಕಣ್ಣೀರಧಾರೆ.

ಇಡೀ ಟೂರ್ನಿಯಲ್ಲಿ ಮಿಂಚಿದ ರೋಹಿತ ಶರ್ಮಾ, ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ ಫೇಲ್ ಆದ್ರು. ಹಿಂದಿನ ಪಂದ್ಯದಲ್ಲಿ ಶತಕ ಸಿಡಿಸಿದ್ದ ಕನ್ನಡಿಗ ಕೆ.ಎಲ್ ರಾಹುಲ, ಫಾರ್ಮ್ ನಲ್ಲಿರುವ ಕ್ಯಾಪ್ಟನ್ ಕೊಹ್ಲಿ ಸಹ ಏನೂ ಮಾಡಲು ಆಗ್ಲಿಲ್ಲ. ಒಟ್ನಲ್ಲಿ ಮಂಗಳವಾರ ಕಾಡಿದ ಮಳೆ ಭಾರತೀಯರ ಕನಸುಗಳನ್ನ ಕೊಚ್ಚಿಕೊಂಡು ಹೋಯ್ತು.


TAG


Leave a Reply

Your email address will not be published. Required fields are marked *

error: Content is protected !!