ಇಂದು 3,693 ಕೇಸ್.. 115 ಸಾವು..

353

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 3,693 ಜನರಲ್ಲಿ ಕರೋನಾ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ 55,115ಕ್ಕೆ ಏರಿಕೆಯಾಗಿದೆ. ಇನ್ನು 115 ಜನ ಸಾವನ್ನಪ್ಪುವುದರೊಂದಿಗೆ ಸಾವಿನ ಸಂಖ್ಯೆ 1147ಕ್ಕೆ ಏರಿಕೆ ಕಂಡಿದೆ.

ಇನ್ನು 1028 ಜನರು ಇಂದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಇದುವರೆಗೂ 20,757 ಜನ ಚೇತರಿಸಿಕೊಂಡಿದ್ದಾರೆ. ಜಿಲ್ಲಾವಾರು ಸೋಂಕಿತರ ವಿವರ ಹೀಗಿದೆ ನೋಡಿ..

ಬೆಂಗಳೂರು ನಗರ 2,208, ಧಾರವಾಡ 157, ಬಳ್ಳಾರಿ 133, ವಿಜಯಪುರ 118, ಬೆಳಗಾವಿ 95, ಮೈಸೂರು 93, ಕಲಬುರಗಿ 89, ಉಡುಪಿ 80, ಉತ್ತರ ಕನ್ನಡ 75, ಬೀದರ 69, ಗದಗ 58, ಹಾವೇರಿ 58, ಕೋಲಾರ 51, ದಕ್ಷಿಣ ಕನ್ನಡ 39, ತುಮಕೂರು 36, ರಾಯಚೂರು 33, ಬೆಂ.ಗ್ರಾ 33, ದಾವಣಗೆರೆ 31, ಚಿಕ್ಕಬಳ್ಳಾಪುರ 31, ಕೊಪ್ಪಳ 30, ಬಾಗಲಕೋಟೆ 29,  ಚಿಕ್ಕಮಗಳೂರು 28, ಚಿತ್ರದುರ್ಗ 24, ಮಂಡ್ಯ 22, ಹಾಸನ 21, ರಾಮನಗರ 14, ಕೊಡಗು 13, ಶಿವಮೊಗ್ಗ 10, ಚಾಮರಾಜನಗರ 10, ಯಾದಗಿರಿ 4 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.

ಇನ್ನು ಬೆಂಗಳೂರಿನಲ್ಲಿ 75, ಧಾರವಾಡ 8, ಮೈಸೂರು 7, ಬೆಳಗಾವಿ 4, ಬಳ್ಳಾರಿ 3, ಉಡುಪಿ 3, ಮಂಡ್ಯ 2, ದಾವಣಗೆರೆ 2,  ಉತ್ತರ ಕನ್ನಡ 2, ವಿಜಯಪುರ 1, ಬಾಗಲಕೋಟೆ 1, ಕೊಡಗು 1, ರಾಯಚೂರು 1, ಕೋಲಾರ 1, ತುಮಕೂರು 1 ಸಾವಿನ ಪ್ರಕರಣ ದಾಖಲಾಗಿದೆ.




Leave a Reply

Your email address will not be published. Required fields are marked *

error: Content is protected !!