ಸಿಂದಗಿ, ದೇ.ಹಿಪ್ಪರಗಿ ಸೇರಿ 13 ಜನರಲ್ಲಿ ಸೋಂಕು

676

ಪ್ರಜಾಸ್ತ್ರ ಸುದ್ದಿ

ಸಿಂದಗಿ: ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನಲ್ಲಿ ಕರೋನಾ ಅಟ್ಟಹಾಸ ಮುಂದುವರೆದಿದೆ. ಇಂದು ತಾಲೂಕಿನಲ್ಲಿ 6 ಹಾಗೂ ದೇವರಹಿಪ್ಪರಗಿ ತಾಲೂಕಿನಲ್ಲಿ 7 ಪ್ರಕರಣಗಳು ದಾಖಲಾಗಿವೆ. ಈ ಮೂಲಕ 13 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.

ವಿದ್ಯಾನಗರ ಬಡಾವಣೆ

ಪಟ್ಟಣದ ಆರೋಗ್ಯ ಇಲಾಖೆಯಲ್ಲಿ 3, ಕೋರ್ಟ್ ಹಿಂಭಾಗ 1, ಸೋಮಜಾಳ ಹಾಗೂ ಬೆನಕೋಟಗಿ ಗ್ರಾಮದಲ್ಲಿ ತಲಾ 1 ಸೋಂಕು ಪ್ರಕರಣ ಪತ್ತೆಯಾಗಿದೆ. ಇನ್ನು ನೂತನ ದೇವರಹಿಪ್ಪರಗಿ ತಾಲೂಕಿನಲ್ಲಿ 7 ಕೇಸ್ ಸೇರಿದಂತೆ 13 ಪ್ರಕರಣಗಳು ಸಿಂದಗಿ ತಾಲೂಕಿನಲ್ಲಿ ದಾಖಲಾಗಿವೆ.

ಇದೀಗ ಸೋಂಕಿತರನ್ನ ಪಟ್ಟಣದ ಅಗ್ನಿಶಾಮಕ ಕಚೇರಿ ಹತ್ತಿರವಿರುವ ವಿದ್ಯಾರ್ಥಿ ವಸತಿ ನಿಲಯದಲ್ಲಿ ಸ್ಥಾಪಿಸಲಾಗಿರುವ ಕೋವಿಡ್ ಸೆಂಟರ್ ನಲ್ಲಿದ್ದು, ನಿಗದಿತ ಆಸ್ಪತ್ರೆಗೆ ದಾಖಲು ಮಾಡಲಾಗ್ತಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಪುರಸಭೆ ಸೀಲ್ ಡೌನ್

ಇನ್ನು ಪಟ್ಟಣದಲ್ಲಿನ ಪುರಸಭೆ ಕಚೇರಿಯನ್ನ ಸೀಲ್ ಡೌನ್ ಮಾಡಲಾಗಿದೆ. ಪುರಸಭೆಯ ಇಬ್ಬರು ಸಿಬ್ಬಂದಿಯಲ್ಲಿ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸೀಲ್ ಡೌನ್ ಮಾಡಲಾಗಿದೆ.




Leave a Reply

Your email address will not be published. Required fields are marked *

error: Content is protected !!