ರಿಯಲ್ ಲೈಫ್ ನಲ್ಲಿ ನಡೀತು ತ್ರಿ ಈಡಿಯಟ್ಸ್ ಘಟನೆ.. 2 ಜೀವ ಉಳಿಸಿದ ವೈದ್ಯೆ

331

ಪ್ರಜಾಸ್ತ್ರ ಸುದ್ದಿ

ಹಾವೇರಿ: ಹಾವೇರಿಯಲ್ಲೊಂದು ಅಪರೂಪದ ಘಟನೆಯೊಂದು ಲಾಕ್ ಡೌನ್ ಟೈಂನಲ್ಲಿ ನಡೆದಿದೆ. ಇದು ನಿಜಕ್ಕೂ ಅಚ್ಚರಿ ಪಡುವ ಸಂಗತ. ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಯ ಬಾಂಣತನವನ್ನ ವಿಡಿಯೋ ಕಾಲ್ ಮೂಲಕ ವೈದ್ಯರೊಬ್ಬರು ಮಾಡಿಸಿದ್ದು, ಎರಡು ಜೀವಗಳ ಉಳಿದಿವೆ.

ಕಳೆದ ಭಾನುವಾರ ಲಾಕ್ ಡೌನ್ ಇದ್ದ ಟೈಂನಲ್ಲಿ ಕಿತ್ತೂರು ಚೆನ್ನಮ್ಮ ವೈದ್ಯರ ಏರಿಯಾದಲ್ಲಿ ವಾಸವಿ ಪತ್ತೆಪೂರ ಅನ್ನೋ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಅಲ್ದೇ, ಸ್ವಲ್ಪ ಹೊತ್ತಿನ ಬಳಿಕ ಮಗು ಅರ್ಧ ಹೊರಗೆ ಬಂದಿದೆ. ಓಣಿಯ ಮಹಿಳೆಯರು ಎಷ್ಟೇ ಸುತ್ತಾಡಿದ್ರೂ ಆಂಬ್ಯುಲೆನ್ಸ್ ಹಾಗೂ ಡಾಕ್ಟರ್ಸ್ ಸಿಗದೆ ಕಂಗಾಲಾಗಿದ್ರು.

ಮಹಿಳೆ ಜೊತೆಯಿದ್ದ ಅಂಕಿತಾ, ವೃತ್ತಿಯಲ್ಲಿ ಎಸಿಎ ಆಗಿದ್ದು ಬೆಂಗಳೂರಿನಲ್ಲಿ ಕೆಲಸ ಮಾಡ್ತಿದ್ದಾರೆ. ಲಾಕ್ ಡೌನ್ ಕಾರಣಕ್ಕೆ ಊರಿಗೆ ಬಂದಿದ್ರು. ಇವರು ತಮ್ಮ ಗೆಳತಿ ಹುಬ್ಬಳ್ಳಿಯಲ್ಲಿರುವ ಹಾವೇರಿಯ ಡಾ.ಪ್ರಿಯಾಂಕಾ ಮಂತಗಿ ಎಂಬುವರಿಗೆ ಫೋನ್ ಮಾಡಿದ್ದಾರೆ. ಗೆಳತಿಗೆ ಪರಿಸ್ಥಿತಿ ವಿವರಿಸಿದ್ದಾರೆ. ಆಗ ಡಾ.ಪ್ರಿಯಾಂಕಾ ವಾಟ್ಸಪ್ ವಿಡಿಯೋ ಕಾಲ್ ಮೂಲಕ ಹೆರಿಗೆ ಮಾಡಿಸುವ ಸಲಹೆ, ಮಾರ್ಗದರ್ಶನ ನೀಡುತ್ತಾ ಬಂದಿದ್ದಾರೆ.

ಅಂಕಿತಾ ಸೇರಿದಂತೆ ಸುತ್ತಲಿನ ಮಹಿಳೆಯರು ಹೆರಿಗೆ ಮಾಡಿದ್ದಾರೆ. ಈಗ ತಾಯಿ ಮಗು ಇಬ್ಬರು ಆರೋಗ್ಯವಾಗಿದ್ದಾರೆ. ಈ ಒಂದು ಸಹಾಯ, ಧೈರ್ಯದಿಂದಾಗಿ ಎರಡು ಜೀವಗಳನ್ನ ಉಳಿಸಿದೆ. ಸ್ವಲ್ಪ ಹೆಚ್ಚು ಕಡಿಮೆಯಾದ್ರೂ ಅನಾಹುತವಾಗ್ತಿತ್ತು. ಅದೃಷ್ಟವಶಾತ್ ಎಲ್ಲವೂ ಚೆನ್ನಾಗಿ ಆಗಿದೆ. ಈ ಘಟನೆ ಬಾಲಿವುಡ್ ನ ಆಮೀರ್ ಖಾನ್, ಕರೀನಾ ಕಪೂರ್ ಸೇರಿದಂತೆ ಹಲವರು ಇರುವ ತ್ರಿ ಈಡಿಯಟ್ಸ್ ಚಿತ್ರದಲ್ಲಿ ನಾಯಕಿಯ ಅಕ್ಕನಿಗೆ ಹೆರಿಗೆ ಮಾಡಿಸುವ ದೃಶ್ಯ ರಿಯಲ್ ಲೈಫ್ ನಲ್ಲಿ ನಿಜ ಮಾಡಿದೆ.




Leave a Reply

Your email address will not be published. Required fields are marked *

error: Content is protected !!