ಬೇಡಿಕೆ ಈಡೇರದಿದ್ದರೆ ಸೆ.1ಕ್ಕೆ ಸಾವಳಗಿ ಬಂದ್

479

ಪ್ರಜಾಸ್ತ್ರ ಸುದ್ದಿ

ಜಮಖಂಡಿ: ಹಂಗಾಮಿ ರಾಷ್ಟ್ರಪತಿ ಬಿ.ಡಿ.ಜತ್ತಿ ಹಾಗೂ ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿಯವರ ತಂದೆಯ ಸ್ವಗ್ರಾಮ ಸಾವಳಗಿಯಲ್ಲಿ ಸರ್ಕಾರಿ ಶಾಲೆ ಇಲ್ಲದಿರುವುದು ರಾಜಕೀಯ ನಿರಾಸಕ್ತಿಗೆ ಕಾರಣವೆಂದು, ಸರ್ವ ಸಂಘಟನೆಗಳ ಮುಖಂಡರು ಬೇಸರ ವ್ಯಕ್ತಪಡಿಸಿದ್ರು.

ಪ್ರಭಾವಿ ರಾಜಕಾರಣಿಗೆ ಸಂಬಂಧಿಸಿದ ಶಿಕ್ಷಣ ಸಂಸ್ಥೆ ಇರುವುದರಿಂದ ಇಲ್ಲಿಯವರೆಗೂ ಸರ್ಕಾರಿ ಪ್ರೌಢಶಾಲೆ ಮಂಜೂರು ಆಗಿಲ್ಲ. ಕೂಡಲೇ ಸರ್ಕಾರಿ ಪ್ರೌಢಶಾಲೆ ಮಂಜೂರು ಮಾಡಬೇಕು ಎಂದು ಆಗ್ರಹಿಸಿ ಸಾವಳಗಿಯ ಸರ್ವ ಸಂಘಟನೆಗಳು ಉಪ ತಹಶೀಲ್ದಾರ್ ವೈ.ಎಚ್.ದ್ರಾಕ್ಷಿ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ರು.

ಕಳೆದ 2 ವರ್ಷಗಳ ಹಿಂದೆ ಪ್ರೌಢಶಾಲೆ ಸಲುವಾಗಿ ಪ್ರಧಾನಿಯವರಿಗೆ ಪತ್ರ ಬರೆದಿದ್ದು, ಪ್ರಧಾನ ಮಂತ್ರಿಗಳ ಕಚೇರಿಯಿಂದ ಒಂದು ವರ್ಷದಲ್ಲಿ ಪ್ರೌಢಶಾಲೆ ನಿರ್ಮಿಸುವ ಭರವಸೆ ನೀಡಿಲಾಯ್ತು. ಆದ್ರೆ, ಇದುವರೆಗೂ ಯಾವುದೇ ಕೆಲಸವಾಗಿಲ್ಲ. ಕಳೆದ ಭಾರಿ ಪ್ರವಾಹದ ವೇಳೆ ಸರ್ಕಾರಿ ಶಾಲೆಗಳ ದಾಖಲೆಗಳು ನಾಶವಾಗಿದ್ದರಿಂದ ಜಮಖಂಡಿ ತಾಲೂಕಿನ ಶಾಲೆಗಳ ವೀಕ್ಷಣೆಗೆ ಬಂದ ಶಿಕ್ಷಣ ಸಚಿವ ಸುರೇಶಕುಮಾರ ಅವರಿಗೂ ಮನವಿ ಸಲ್ಲಿಸಿದ್ದು, ಮುಂದಿನ ಶೈಕ್ಷಣಿಕ ವರ್ಷದಲ್ಲಿ ಸಾವಳಗಿ ಗ್ರಾಮದಲ್ಲಿ ಪ್ರಾಥಮಿಕ ಶಾಲೆಗಳಲ್ಲಿರುವ 1 ರಿಂದ 8 ತರಗತಿಗಳನ್ನ 9-10 ತರಗತಿಯವರೆಗೆ ಉನ್ನತಿಕರಿಸುವುದಾಗಿ ಭರವಸೆ ನೀಡಿದ್ರು. ಹೀಗೆ ಬರೀ ರಾಜಕಾರಣಿಗಳ ಭರವಸೆ ಮಾತಿನಲ್ಲಿ ಉಳಿಯುತ್ತಿದ್ದು, ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳದೆ ಹೋದ್ರೆ ಸೆಪ್ಟೆಂಬರ್ 1ರಂದು ಸಾವಳಗಿ ಬಂದ್ ಮಾಡಲಾಗುವುದು ಎಂದು ಎಚ್ಚರಿಕೆ ನೀಡಲಾಯ್ತು.

ಮಾರ್ಚ್‌ ನಲ್ಲೇ ಶಿಕ್ಷಣ ಸಚಿವರಿಗೆ ಮನವಿ ಮಾಡಿದ್ದೇನೆ. ಕೋವಿಡ್ 19 ಕಾರಣ ಅದನ್ನು ಫಾಲೋಪ್ ಮಾಡಲು ಆಗಲಿಲ್ಲ. ನಾನು ಮತ್ತೆ ಈ ಕುರಿತು ಸಚಿವರು, ಅಧಿಕಾರಿಗಳೊಂದಿಗೆ ಮಾತನಾಡುತ್ತೇನೆ.

ಆನಂದ ನ್ಯಾಮಗೌಡ, ಶಾಸಕರು, ಜಮಖಂಡಿ

ಈ ಸಂದರ್ಭದಲ್ಲಿ ಗ್ರಾಮ ಲೆಕ್ಕಾಧಿಕಾರಿ ಆನಂದ ರಾಠೋಡ, ಅಮೀತ ಸೂರಗೊಂಡ, ಸಿದ್ದು ಬಂಡಿವಡ್ಡರ, ಸಿದ್ದಾರ್ಥ ತಳಕೇರಿ, ಕಿರಣ ಸೂರಗೊಂಡ, ಮಹಾದೇವ ತಳಕೇರಿ, ಅಪ್ಪು ಕೊಕಟನೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.




Leave a Reply

Your email address will not be published. Required fields are marked *

error: Content is protected !!