ಟೀಂ ಇಂಡಿಯಾ ಆಟಗಾರ ಶಾ ವಿರುದ್ಧ ದೂರು

111

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಭೋಜಪುರಿ ನಟಿಯೊಂದಗಿನ ಗಲಾಟೆ ವಿಚಾರಕ್ಕೆ ಸಂಬಂಧಿಸಿದಂತೆ ಟೀಂ ಇಂಡಿಯಾ ಯುವ ಆಟಗಾರ ಪೃಥ್ವಿ ಶಾ ವಿರುದ್ಧ ದೂರು ದಾಖಲಾಗಿದೆ. ಮಂಗಳವಾರ ಪೊಲೀಸ್ ಕಸ್ಟಡಿಯಿಂದ ಬಿಡುಗಡೆಯಾಗಿ ಬಂದ ನಟಿ ಸ್ವಪ್ನಾ ಗಿಲ್ ಅನ್ನೋ ಯುವತಿ ಇಂದು ಶಾ ವಿರುದ್ಧ ದೂರು ನೀಡಿದ್ದಾಳೆ.

ಪೃಥ್ವಿ ಶಾ ಅನುಚಿತವಾಗಿ ವರ್ತಿಸಿದ್ದಾನೆ. ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ನಿನ್ನೆಯಷ್ಟೇ ಸ್ವಪ್ನಾ ಗಿಲ್ ಆರೋಪಿಸಿದ್ದಳು. ತಮ್ಮ ವಕೀಲರ ಮೂಲಕ ಮುಂಬೈನ ಅಂಧೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಐಪಿಸಿ ಸೆಕ್ಷನ್ 34, 120 ಬಿ, 144, 146, 148, 149, 323, 324, 351, 354 ಮತ್ತು 509ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇದಕ್ಕೂ ಮೊದಲು ಪೃಥ್ವಿ ಶಾ, ನಟಿ ಸ್ವಪ್ನಾ ಗಿಲ್ ಸೇರಿ ಇತರರ ಮೇಲೆ ದೂರು ದಾಖಲಿಸಿದ್ದರು. ಹೀಗಾಗಿ ಯುವತಿ ಸೇರಿ 8 ಜನರನ್ನು ಬಂಧಿಸಲಾಗಿತ್ತು. ಒಟ್ಟಿನಲ್ಲಿ ಈ ಒಂದು ಪ್ರಕರಣ ಹಲ್ಲೆ, ದಾಳಿ, ಲೈಂಗಿಕ ಕಿರುಕುಳ ಸೇರಿ ಬೇರೆ ಬೇರೆ ಸ್ವರೂಪ ಪಡೆದುಕೊಳ್ಳುತ್ತಿದೆ.




Leave a Reply

Your email address will not be published. Required fields are marked *

error: Content is protected !!