ಬೆರಗು ಪ್ರಕಾಶನದಿಂದ 10 ಕೃತಿಗಳ ಲೋಕಾರ್ಪಣೆ

445

ಪ್ರಜಾಸ್ತ್ರ ಸಾಹಿತ್ಯ ಮತ್ತು ರಂಗಭೂಮಿ

ಆಲಮೇಲ: ನಾಡಿನ ವಿವಿಧ ಲೇಖಕರ 10 ಕೃತಿಗಳನ್ನ ಬೆರಗು ಪ್ರಕಾಶನ ಪ್ರಕಟಿಸಿದ್ದು, ಸೋಮವಾರ ಲೋಕಾರ್ಪಣೆಗೊಳ್ಳುತ್ತಿವೆ. ಪಟ್ಟಣದ ವಿರಕ್ತ ಮಠದಲ್ಲಿ ಫೆಬ್ರವರಿ 1, 2021ರಂದು ಆಯೋಜಿಸಿರುವ ಕಾರ್ಯಕ್ರಮದಲ್ಲಿ ಕೃತಿಗಳು ಲೋಕಾರ್ಪಣೆಗೊಳ್ಳಲಿವೆ.

ಶ್ರೀ ಮುನಿಪ್ರ ಜಗದೇವ ಮಲ್ಲಿಬೊಮ್ಮಯ್ಯ ಸ್ವಾಮೀಜಿ ಸಾನಿಧ್ಯ ವಹಿಸಿಕೊಳ್ಳಲಿದ್ದಾರೆ. ಸಾಹಿತಿ ರಾಜಶೇಖರ ಮಠಪತಿ(ರಾಗಂ) ಪುಸ್ತಕ ಬಿಡುಗಡೆಗೊಳಿಸಲಿದ್ದಾರೆ. ಶಂಕರ ಬೈತಾಳ, ಡಾ.ಸುಜಾತ ಚಲವಾದಿ ಕೃತಿಗಳ ಕುರಿತು ಮಾತ್ನಾಡಲಿದ್ದಾರೆ. ಕವಯತ್ರಿ ಶಶಿಕಲಾ ವಸ್ತ್ರದ ಅಧ್ಯಕ್ಷತೆ ವಹಿಸಿಕೊಳ್ಳುತ್ತಿದ್ದಾರೆ.

ಸಾಹಿತಿಗಳಾದ ಸಿದ್ದರಾಮ ಉಪ್ಪಿನ, ಕೆ.ಎಚ್ ಸೋಮಾಪುರ, ಮಲ್ಲಿಕಾರ್ಜುನ ಜೇವರಗಿ, ರಮೇಶ ಎಸ್.ಕತ್ತಿ, ಸುಭಾಶ್ಚಂದ್ರ ನಾವಿ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ.

ಬಿಡುಗಡೆಗೊಳ್ಳಲಿರುವ ಕೃತಿಗಳು

ವಚನಾಮೃತ (ಜಗದೇವ ಮಲ್ಲಿಬೊಮ್ಮಯ್ಯ ಸ್ವಾಮೀಜಿ)

ದಣಿದ ದೋಣಿ, ಸ್ತಬ್ಧ (ಸಿದ್ಧರಾಮ ಉಪ್ಪಿನ)

ಲಾವಣಿಕಾರ ಸಾಲೋಟಗಿ ನಿಂಗಪ್ಪ, ಪರಮಾತ್ಮನೊಬ್ಬನೇ (ಸುಭಾಶ್ಚಂದ್ರ ನಾವಿ)

ಏನನ್ನೂ ಹೇಳುವುದಿಲ್ಲ, ಕಡಣಿ ಕಾವ್ಯಧಾರೆ, ರಂಗಪರಿಚಾರಕ ಗಂಗಾಧರಪ್ಪ ಉಪ್ಪಿನ (ಡಾ.ರಮೇಶ ಕತ್ತಿ)

ಗಂಗೆತ್ತು (ಕೆ.ಎಚ್ ಸೋಮಾಪುರ)

ದತ್ತ ಪಾದುಕಾ (ಮಲ್ಲಿಕಾರ್ಜುನ ಜೇವರಗಿ)




Leave a Reply

Your email address will not be published. Required fields are marked *

error: Content is protected !!