ನಾಳೆಯಿಂದ ಭಜರಂಗಿ-2 ಅಬ್ಬರ

282

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಕೋವಿಡ್ 19 ನಂತರ ಶೇಕಡ 100ರಷ್ಟು ಆಸನ ಭರ್ತಿಗೆ ಅವಕಾಶ ನೀಡಿದ ಬಳಿಕ ಸಾಲು ಸಾಲು ಸ್ಟಾರ್ ನಟರ ಬಿಗ್ ಬಜೆಟ್ ಚಿತ್ರಗಳು ಬರುತ್ತಿವೆ. ಅದರಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಭಜರಂಗಿ-2 ಒಂದಾಗಿದ್ದು, ನಾಳೆಯಿಂದ ಆರ್ಭಟ ಶುರುವಾಗಲಿದೆ.

ಎ.ಹರ್ಷ ನಿರ್ದೇಶನದ ಭಜರಂಗಿ-2 ಚಿತ್ರ ನಾಳೆಯಿಂದ ಭರ್ಜರಿಯಾಗಿ ರಿಲೀಸ್ ಆಗುತ್ತಿದೆ. ಇದು ಭಜರಂಗಿ-1 ಚಿತ್ರದ ಮುಂದುವರೆದ ಭಾಗ ಅಲ್ಲವೆಂದು ನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ. ಈಗಾಗ್ಲೇ ಟ್ರೇಲರ್, ಪೋಸ್ಟರ್ ಭಾರೀ ಹೈಪ್ ಕ್ರಿಯೇಟ್ ಮಾಡಿವೆ.

ಚಿತ್ರದಲ್ಲಿ ನಟಿ ಭಾವನಾ, ಶ್ರುತಿ, ನಟ ಸೌರವ್ ಲೋಕೇಶ್ ತುಂಬಾ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ನಟಿ ಶ್ರುತಿ ತುಂಬಾ ವಿಶೇಷವಾಗಿ ಕಾಣಿಸಿಕೊಂಡಿದ್ದಾರೆ. ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ಎ.ಹರ್ಷ ಇದೀಗ ಮತ್ತೊಂದು ಮಾಸ್ ಎಂಟ್ರಟೈನ್ಮೆಂಟ್ ನೀಡುತ್ತಿದ್ದು, ಶಿವಣ್ಣನ ಅಭಿಮಾನಿಗಳು ಹಬ್ಬ ಮಾಡಲಿದ್ದಾರೆ.




Leave a Reply

Your email address will not be published. Required fields are marked *

error: Content is protected !!