ಸಿಂದಗಿ ಉಪ ಕದನ: 2,34,584 ಮತದಾರರು.. 297 ಮತದಾನ ಕೇಂದ್ರಗಳು

250

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಜಿಲ್ಲೆಯ ಸಿಂದಗಿ ತಾಲೂಕಿನ ವಿಧಾನಸಭೆ ಉಪ ಚುನಾವಣೆ ಮತದಾನ ಅಕ್ಟೋಬರ್ 30ರಂದು ನಡೆಯುತ್ತಿದೆ. ಈ ಸಂಬಂಧ ಮಾಧ್ಯಮಗೋಷ್ಠಿ ನಡೆಸಿದ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ, ಅಕ್ಟೋಬರ್ 30ರಂದು ಬೆಳಗ್ಗೆ 7ರಿಂದ ಸಂಜೆ 7 ಗಂಟೆಯ ತನಕ ಮತದಾನ ನಡೆಯಲಿದೆ ಎಂದರು.

1,20,844 ಪುರುಷ ಮತದಾರರು, 1,13,561 ಮಹಿಳಾ ಮತದಾರರು, 32 ಇತರೆ, 147 ಸೇವಾ ಮತದಾರರು ಸೇರಿದಂತೆ 2,34,584 ಮತದಾರರು ಇದ್ದಾರೆ. 271 ಮತದಾನ ಕೇಂದ್ರ ಹಾಗೂ ಹೆಚ್ಚುವರಿಯಾಗಿ 26 ಸೇರಿ 297 ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದರು.

7 ಚೆಕ್ ಪೋಸ್ಟ್, 22 ಸೆಕ್ಟರ್ ಅಧಿಕಾರಿಗಳು, 18 ಫ್ಲೈಯಿಂಗ್ ಸ್ಕ್ವೇಡ್, 21 ಸ್ಟ್ಯಾಟಿಕ್ ಸರ್ವೆಲೆನ್ಸ್ ಟೀಂ ಕೆಲಸ ಮಾಡುತ್ತಿವೆ. ಮತದಾನದ 1,308 ಸಿಬ್ಬಂದಿ ನೇಮಕ ಮಾಡಲಾಗಿದೆ. 327 ಪಿಆರ್ ಒ, 327 ಎಪಿಆರ್ ಒ, 654 ಪಿ.ಒ ಇದರಿಲ್ಲಿದ್ದಾರೆ. 66 ಬಸ್ ಸೇರಿ ಇತರೆ ವಾಹನ ವ್ಯವಸ್ಥೆ ಮಾಡಲಾಗಿದೆ. ವಿಜಯಪುರ ನಗರದ ಸೈನಿಕ ಶಾಲೆಯ ಒಡೆಯರ್ ಹೌಸ್ ನಲ್ಲಿ ನವೆಂಬರ್ 2ರ ಬೆಳಗ್ಗೆ 8ಗಂಟೆಗೆ ಮತ ಎಣಿಕೆ ನಡೆಯಲಿದೆ ಅಂತಾ ತಿಳಿಸಿದರು.

ಇನ್ನು ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಸಂಬಂಧ 13, ಕೋವಿಡ್ ನಿರ್ಬಂಧ ಉಲ್ಲಂಘನೆ 8, ಮಾದರಿ ನೀತಿ ಸಂಹಿತೆ ಉಲ್ಲಂಘನೆ 2, ಎರಡು ಪಕ್ಷಗಳ ನಡುವೆ ಗಲಾಟೆ 1 ಸೇರಿದಂತೆ 24 ಪ್ರಕರಣಗಳು ದಾಖಲಾಗಿವೆ. 307 ಲೀಟರ್ ಮದ್ಯ ವಶ ಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು. ಈ ವೇಳೆ ಎಸ್ಪಿ ಹೆಚ್.ಡಿ ಆನಂದ್ ಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ್ ಕಳಸದ್, ಜಿಲ್ಲಾ ಪಂಚಾಯ್ತಿ ಸಿಇಒ ಗೋವಿಂದರೆಡ್ಡಿ ಹಾಜರಿದ್ದರು.




Leave a Reply

Your email address will not be published. Required fields are marked *

error: Content is protected !!