ಭಾಸ್ಕರ ರಾವ್ ವರ್ಗಾವಣೆಗೆ ಅವರು ಕಾರಣಾನಾ?

357

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಸಿಲಿಕಾನ್ ಸಿಟಿಯ ಪೊಲೀಸ್ ಕಮಿಷನರ್ ಆಗಿ ಒಂದು ವರ್ಷ ಕಂಪ್ಲೀಟ್ ಮಾಡಲು ಇನ್ನು ಎರಡು ದಿನ ಬಾಕಿ ಇರುವಾಗ್ಲೇ ಭಾಸ್ಕರ ರಾವ್ ಅವರ ವರ್ಗಾವಣೆಯಾಗಿದೆ. ಇವರ ಜಾಗಕ್ಕೆ ಕಮಲ್ ಪಂಥ ಅವರು ಬಂದಿದ್ದು, ಇಂದು ಬೆಳಗ್ಗೆ 11 ಗಂಟೆಗೆ ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆಯಿದೆ.

ಕಮಲ್ ಪಂಥ್

ಈ ಇಬ್ಬರು 1990ರ ಬ್ಯಾಚ್ ನ ಐಪಿಎಸ್ ಅಧಿಕಾರಿಗಳಾಗಿದ್ದಾರೆ. ಅಲ್ದೇ, ಒಳ್ಳೆಯ ಸ್ನೇಹಿತರು ಸಹ ಆಗಿದ್ದು, ಆಗಸ್ಟ್ 20ರಂದು ಒಟ್ಟಿಗೆ ತಮ್ಮ ವೃತ್ತಿಯನ್ನ ಪ್ರಾರಂಭಿಸಿದ್ದಾರೆ. ಈಗ ವಿಚಾರ ಇದಲ್ಲ. ಭಾಸ್ಕರ ರಾವ್ ಅವರ ವರ್ಗಾವಣೆ ಹಿಂದೆ ಡಿಸಿಎಂ ಅಶ್ವಥ ನಾರಾಯಣ ಅವರು ಕಾರಣ ಅನ್ನೋ ಆರೋಪ ಕೇಳಿ ಬಂದಿದೆ.

ಕಾರಣ, ಲಾಕ್ ಡೌನ್ ಟೈಂನಲ್ಲಿ ಭಾಸ್ಕರ ರಾವ್ ಅವರು ಅಗತ್ಯ ಸೇವೆ ಸಲ್ಲಿಸ್ತಿರುವವರಿಗೆ ಮಾತ್ರ ಪಾಸ್ ಕೊಡುವುದಾಗಿ ಹೇಳಿದ್ರು. ಈ ವಿಚಾರಕ್ಕೆ ಜನಪ್ರತಿನಿಧಿಗಳ ನಡುವೆ ಒಂದಿಷ್ಟು ಮುಸುಕಿನ ಗುದ್ದಾಟ ನಡೆದಿತ್ತು. ಅಲ್ದೇ, ಗೃಹ ಸಚಿವರ ಸಭೆಯಲ್ಲೇ ಡಿಸಿಎಂ ಅಶ್ವಥ ನಾರಾಯಣ, ಆಹಾರ ಸರಬರಾಜು ಮಾಡುವ ಯುವಕರಿಗೆ ಪಾಸ್ ನೀಡುತ್ತಿಲ್ಲವೆಂದು ಆರೋಪ ಮಾಡಿದ್ರು.

ಇದರ ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ಭಾಸ್ಕರ ರಾವ್ ಅವರಿಗೆ ದೊಡ್ಡ ಫ್ಯಾನ್ ಫಾಲೋವಿಂಗ್ ಇದೆ. ಅದರಲ್ಲೂ ಡಿಸಿಎಂ ಅಶ್ವಥ ನಾರಾಯಣ ಕ್ಷೇತ್ರವಾದ ಮಲ್ಲೇಶ್ವರಂನಲ್ಲಿ ಹೆಚ್ಚಾಗಿ ಇದೆ. ಇದೆಲ್ಲವೂ ಮಿಕ್ಸ್ ಆಗಿ ಇವರ ವರ್ಗಾವಣೆಗೆ ಕಾರಣವಾಗಿರಬಹುದು ಅನ್ನೋ ಮಾತುಗಳು ಕೇಳಿ ಬರ್ತಿವೆ. ಯಾವುದು ಸತ್ಯ ಅನ್ನೋದು ಮುಂದಿನ ದಿನಗಳಲ್ಲಿ ಸಂಬಂಧಪಟ್ಟವರು ಹೇಳಿದ್ರೆ ಗೊತ್ತಾಗಬಹುದು.




Leave a Reply

Your email address will not be published. Required fields are marked *

error: Content is protected !!