ರೀಲ್ಸ್ ಮೋಹ: ತಂದೆ, ತಾಯಿ, ಮಗ ಸಾವು

214

ಪ್ರಜಾಸ್ತ್ರ ಸುದ್ದಿ

ಚಿಕ್ಕಬಳ್ಳಾಪುರ: ರೀಲ್ಸ್ ವಿಡಿಯೋ ಮೋಹದಿಂದಾಗಿ ಮೂವರು ಮೃತಪಟ್ಟ ಘಟನೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 44ರ ಹೊನ್ನೇನಹಳ್ಳಿ ಗೇಟ್ ಬಳಿ ನಡೆದಿದೆ. ತಂದೆ, ತಾಯಿ ಹಾಗೂ ಮಗ ಮೃತಪಟ್ಟ ದುರ್ದೈವಿಗಳು.

ಬೆಂಗಳೂರಿನಲ್ಲಿ ಸೆಕೆಂಡ್ ಹ್ಯಾಂಡ್ ಬೈಕ್ ಮಾರಾಟ ಮಾಡುವ ಕೆಲಸ ಮಾಡುವ ಗೌಸ್, ಪತ್ನಿ ಅಮ್ಮಾಜಾನ್, ಮಗ ರಿಯಾನ್ ಜೊತೆಗೆ ಪತ್ನಿಯ ತವರೂರಾದ ಆಂಧದ್ರದ ಕದಿರಿಗೆ ಹೊರಟಿದ್ದರು. ಬೈಕ್ ನಲ್ಲಿ ಹೊರಟಿರುವಾಗ ಮಗ ರೀಲ್ಸ್ ನಲ್ಲಿ ವಿಡಿಯೋ ಮಾಡುತ್ತಿದ್ದ. ಇದನ್ನು ಅಪ್ಪ ಅಮ್ಮ ನೋಡುತ್ತಾ ಹೊರಟಿದ್ದರು.

ತಾಲೂಕಿನ ಹೊನ್ನೇನಹಳ್ಳಿ ಗೇಟ್ ಬಳಿ ಹತ್ತಿರದ ಹೋಟೆಲ್ ವೊಂದರಲ್ಲಿ ಯೂಟರ್ನ್ ತೆಗೆದುಕೊಳ್ಳುವಾಗ ವೇಗವಾಗಿ ಬರುತ್ತಿದ್ದ ಖಾಸಗಿ ಬಸ್ ಇವರ ಬೈಕಿಗೆ ಗುದ್ದಿದೆ. ಇದರ ಪರಿಣಾಮ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಬಸ್ ಚಾಲಕ ಪರಾರಿಯಾಗಿದ್ದಾನೆ. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.




Leave a Reply

Your email address will not be published. Required fields are marked *

error: Content is protected !!