ಪ್ರಜಾಸ್ತ್ರ ಸುದ್ದಿ
ಬೆಳಗಾವಿ: ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಶಾಸಕ ಸಿ.ಟಿ ರವಿ, ರಕ್ತ ಪರೀಕ್ಷೆ ಆಗಲಿ. ನನ್ನ ಬ್ಲಡ್ ನಲ್ಲಿ ಗಾಂಜಾ, ಮದ್ಯಾಪಾನ ಮಾಡಿರುವುದು ಸಿಕ್ಕರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದಿದ್ದಾರೆ.
ಪ್ರತಿ ವರ್ಷ ನಾನು ಆಸ್ತಿ ಘೋಷಣೆ ಮಾಡ್ತಿದೀನಿ. ನನ್ನ ಆಸ್ತಿಯೇನು 800 ಪಟ್ಟು ಹೆಚ್ಚಿಗೆ ಆಗಿಲ್ಲ. ನಮ್ಮ ಅಪ್ಪ ಮುಖ್ಯಮಂತ್ರಿ ಆಗಿರಲಿಲ್ಲ ಬೇನಾಮಿ ಆಸ್ತಿ ಮಾಡೋದಕ್ಕೆ. ಅಕ್ರಮ ಆಸ್ತಿ ಇರೋದು ಅವರು ತೋರಿಸಲಿ. ಕುಡಿದು ಓಡಾಡೋಕ್ಕೆ ಆಗದೆ ಇರೋರು ಯಾರೆಂದು ಎಲ್ಲರಿಗೂ ಗೊತ್ತು ಎಂದು ಕಾಲೆಳೆದರು.